ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

Public TV
2 Min Read

ವರು ಒಟ್ಟು 10 ಮಂದಿ ಕಿಲಾಡಿಗಳು. ಅದ್ರಲ್ಲೊಬ್ಬ ಸಿಂಗರ್. ಇನ್ನೊಬ್ಬ ಡಾನ್ಸರ್. ಮತ್ತೊಬ್ಬ ಹಾಸ್ಯಕ್ಕೆ ಪಂಟರ್. ಹಳ್ಳಿ ಹೈದರಿಗೆ ಮಾತೇ ಬಂಡವಾಳ. ಮಾತಿನಿಂದಲೇ ಸುರಸುಂದರಿಯರನ್ನ ಪಟಾಯಿಸೋದ್ರಲ್ಲಿ ಯಶಸ್ವಿಯಾಗ್ತಾರಾ? ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಕೊಡ್ತಿರುವ ಹೊಸ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗ್ರ್ಯಾಂಡ್ ಓಪನಿಂಗ್ ಸಖತ್ತಾಗಿತ್ತು.

ಮಾತಲ್ಲೇ ಮನೆಕಟ್ಟೋ 10 ಹುಡುಗರು. ಮನಸ್ಸು ತುಂಬಾ ದೊಡ್ಡ ದೊಡ್ಡ ಕನಸು ಕಟ್ಟಿಕೊಂಡಿರುವ 10  ಹುಡುಗೀರು. ಈ ಹತ್ತೂ ಹುಡ್ಗೀರದ್ದು ಬಣ್ಣಬಣ್ಣದ ಕನಸು. ಆದರೆ ಈ ಹತ್ತು ಹುಡುಗರದ್ದು ಹುಡುಗಿಯರ ಮನ ಒಲಿಸೋಕೆ ಸರ್ಕಸ್ಸು. ಸೂಟು ಬೂಟು ಹಾಕೊಳ್ಳೋಕೆ ಬರಲ್ಲ. ಹೈಫೈ ಕಾರಂತೂ ಇಲ್ಲವೇ ಇಲ್ಲ. ಇಂಗ್ಲೀಷು ಬರಲ್ಲ. ಕನ್ನಡ ಬಿಟ್ಟು ನಾವಿಲ್ಲ ಎನ್ನುವ ಹಳ್ಳಿ ಹೈಕಳು.

ಜೀ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗೆ ಚಾಲನೆ ಸಿಕ್ಕಿದೆ. ನಿರ್ಣಾಯಕರ ಸ್ಥಾನದಲ್ಲಿ ಕನಸುಗಾರ ರವಿಚಂದ್ರನ್ ಹಾಗೂ ಡಿಂಪಲ್‌ ಕ್ವೀನ್ ರಚಿತಾ ಕುಳಿತಿದ್ದಾರೆ. ದಶ ಹುಡುಗರು ದಶ ಹುಡುಗಿಯರು ಈ ರಿಯಾಲಿಟಿ ಶೋ ಮುಖ್ಯ ಸ್ಪರ್ಧಿಗಳು. ತಮ್ಮ ಟ್ಯಾಲೆಂಟ್‌ನಿಂದ ಈಗಾಗ್ಲೇ ಗುರುತಿಸಿಕೊಂಡಿದ್ದಾರೆ ಕಿಲಾಡಿಗಳು. ಆದರೆ ಇವರಿಗೆ ಹುಡ್ಗೀರ್ ಮಾತ್ರಾ ಬೀಳ್ತಿಲ್ಲ. ಯಾಕಂದ್ರೆ ಇವ್ರೆಲ್ಲಾ ಹುಡುಗರ ಬಗ್ಗೆ ದೊಡ್ಡ ದೊಡ್ಡ ಕನಸು ಹೊತ್ತ ಅಲ್ಟ್ರಾ ಮಾಡರ್ನ್ ಹುಡ್ಗೀರು.

ವಿವಿಧ ಧಾರಾವಾಹಿಗಳಲ್ಲಿ ನಟನೆಯಿಂದ ಹೆಸರು ಮಾಡಿರುವ ನಟಿಯರೇ ಭರ್ಜರಿ ಬ್ಯಾಚುಲರ್ಸ್‍ ಗಳಿಗೆ ಸ್ವಯಂ ವರಕ್ಕೆ ನಿಂತಿರುವ ಸುಂದರಾಂಗಿಯರು. ಅಂದಚಂದ, ನೃತ್ಯ, ಹಾಡು ಓದು ಬರಹದಲ್ಲಿ ಮುಂದಿರುವ ಈ ಸುಂದರಿಯರಿಗೆ ತಕ್ಕಂಥ ಜೋಡಿ ಈ ದಶ ಕಿಲಾಡಿಗಳಲ್ಲಿ ಯಾರಾಗ್ತಾರೆ? ಎಲ್ಲರಿಗೂ ಕುತೂಹಲ ಇದೆ. ಒಬ್ಬೊಬ್ಬರಾಗೇ ಬ್ಯಾಚುಲರ್‌ಗಳು ಅಖಾಡಕ್ಕಿಳಿದು ಸುಂದರಿಯರನ್ನ ಒಲಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಭಾರೀ ಮಿಂಚಿರುವ ಪ್ರತಿಭೆಗಳು ತಮ್ಮ ನಟನೆ, ಮಾತಿನ ಚತುರತೆಯಿಂದ ಹುಡ್ಗೀರ ಮನ ಗೆಲ್ಲಬೇಕಿಗೆ. ಯಾಕಂದ್ರೆ ಲುಕ್ ಇಲ್ಲ. ಆದರೆ ಲಕ್‌ನಿಂದ ಯಾವ ಸುಂದರಿಯರೂ ಮಾತಿಗೆ ಕರುಗುತ್ತಿಲ್ಲ. ಹೀಗಾಗೇ ರಿಯಾಲಿಟಿ ಶೋ ಆರಂಭದಲ್ಲೇ ಹುಡ್ಗೀರ ಮನ ಕದಿಯಲು ಭರ್ಜರಿ ಸರ್ಕಸ್ ಮಾಡ್ತಿದ್ದಾರೆ ಭರ್ಜರಿ ಬ್ಯಾಚುಲರ್ಸ್.

ಭರ್ಜರಿ ಬ್ಯಾಚುಲರ್ಸ್ ಪಟ್ಟಿಯಲ್ಲಿ ವಿಧ ವಿಧದ ಪ್ರತಿಭೆಗಳಿವೆ. ಮುಗ್ಧತೆಯಿಂದ ಹೆಸರು ಮಾಡಿರುವ ಕುರಿಗಾಹಿ ಸಿಂಗರ್ ಹನುಮಂತ. ಹುಡ್ಗೀರ್ ಕಂಡ್ರೆ ನಾಚಿಕೊಳ್ತಾನೆ. ಈ ಸ್ಪರ್ಧೆಯಲ್ಲಿ ಹೇಗೆ ಕಾಣಿಸ್ಕೊಳ್ತಾನೆ ಅನ್ನೋದು ಕುತೂಹಲ. ಇನ್ನು ಹುಡ್ಗೀರ ಪಾತ್ರದಲ್ಲೇ ಮಿಂಚುವ ರಾಘವೇಂದ್ರಾಗೆ ಹುಡ್ಗೀರ ಸ್ನೇಹವಷ್ಟೇ ಅಲ್ಲದೇ ಪ್ರೀತಿಯೂ ಸಿಗಬೇಕಿದೆ. ಹೇಗೆ ಯಶಸ್ವಿಯಾಗ್ತಾನೆ ಅನ್ನೋದು ನಿರೀಕ್ಷೆ.

ರಾಕೇಶ್, ಮನೋಹರ್, ಸೂರಜ್ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಸಿಕ್ಕಿರುವ ಜೀ ಪ್ರತಿಭೆಗಳು. ಆದರೆ ನಗಿಸುವಷ್ಟು ಸುಲಭವಾ ಹುಡ್ಗೀರ ಮನ ಗೆಲ್ಲೋದು? ಅದನ್ನ ಸ್ವತಃ ಟ್ರೈ ಮಾಡೋಕೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಕಾಣಿಸ್ಕೊಂಡಿದ್ದಾರೆ. ಈ ಕಿಲಾಡಿಗಳಿಗೆ ಕಾಳ್ ಹಾಕೋದು ಸುಲಭ. ಆದರೆ ಆ ಕಾಳನ್ನ ಆರಿಸಿಕೊಳ್ಳೋಕೆ ಇಲ್ಲಿ ಹುಡ್ಗೀರಂತೂ ಸಿದ್ಧವಿಲ್ಲ.

ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರೋ ಹಲವು ಪ್ರತಿಭೆಗಳು ಒಂದೆಡೆ ಸೇಕ್ಕೊಂಡು ಮಸ್ತ್ ಮನರಂಜನೆ ಕೊಡಲು ಬಂದಿದ್ದಾರೆ. ಆದರೆ ಹುಡ್ಗೀರ್ ಮಾತ್ರಾ ಪ್ರತಿಭೆ ಜೊತೆ ಪೈಲ್ವಾನ್ ಗುಣದ ಹುಡುಗ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಭರ್ಜರಿ ಬ್ಯಾಚುಲರ್‌ಗಳಿಗೆ ಯಾವ ಯಾವ ಹುಡ್ಗೀರು ಸೆಟ್ ಆಗ್ತಾರೋ ನೋಡ್ಬೇಕಿದೆ.

Share This Article