ಭಾರೀ ಮಳೆಗೆ ಮೂರ್ನಾಡು ಸಮೀಪದ ಕಿರುಸೇತುವೆ ಮುಳುಗಡೆ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ನದಿಯ ಪ್ರತಾಪಕ್ಕೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಿರುಸೇತುವೆ ಮುಳುಗಡೆಗೊಂಡಿದೆ.

ಕಾವೇರಿ ಹೊಳೆಯ ಕಿರುಸೇತುವೆ ನೀರಿನಿಂದ ಮುಳುಗಡೆಗೊಂಡು ಸೇತುವೆಯ ಮೇಲ್ಭಾಗದಲ್ಲಿ 12 ರಿಂದ 13 ಅಡಿಗಳಷ್ಟು ನೀರು ಹರಿಯುತ್ತಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಪಂಚಾಯತಿಯಿಂದ ನದಿ ಪಾತ್ರದ ಜನರಿಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗು ಮುನ್ಸೂಚನೆ ನೀಡಿದು ಸುರಕ್ಷಿತ ಸ್ಥಳಗಳಿಗೆ ಅಥವಾ ಕಾಳಜಿ ಕೇಂದ್ರಗಳಿ ತೆರಳುವಂತೆ ನೋಟಿಸ್ ನೀಡಲಾಗಿದೆ.

ಸದ್ಯ ಕೊಡಗು ಜಿಲ್ಲೆಯಲ್ಲಿ ವರುಣ ಆರ್ಭಟ ಕೊಂಚ ತಗ್ಗಿದೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಇಳಿಮುಖಗೊಂಡಿದ್ದು, ತ್ರಿವೇಣಿ ಸಂಗಮ ಕ್ಷೇತ್ರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದನ್ನೂ ಓದಿ: 50 ನಿಮಿಷ ಶೆಡ್‍ನಲ್ಲಿ ರೇಣುಕಾಸ್ವಾಮಿ ಮೇಲೆ ‘ಪೊರ್ಕಿ’ ಕ್ರೌರ್ಯ!

Share This Article