ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

Public TV
1 Min Read

ಬೆಂಗಳೂರು: ಟೀ ಕುಡಿಯಲು ಬೇಕರಿ ಬಳಿ ಬಂದಿದ್ದ ರೌಡಿಶೀಟರ್‌ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಂಗಳೂರಿನ (Bengaluru) ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ.

ಸಹದೇವ್ ಕೊಲೆಯಾದ ರೌಡಿಶೀಟರ್. ರಾತ್ರಿ 9:30 ರ ಸುಮಾರಿಗೆ ಸಹದೇವ್‌ ಹತ್ಯೆಯಾಗಿದೆ. ಈತ ಕೋಣನಕುಂಟೆ ಠಾಣೆ ವ್ಯಾಪ್ತಿಯ ರೌಡಿಶೀಟರ್‌ ಆಗಿದ್ದ. ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

ಟೀ ಕುಡಿಯಲು ಬೇಕರಿ ಬಳಿ ರೌಡಿಶೀಟರ್‌ ಸಹದೇವ್‌ ಬಂದಿದ್ದ. ಈ ವೇಳೆ ಮೂರು ಬೈಕ್‌ನಲ್ಲಿ ಬಂದಿದ್ದ ಆರು ಮಂದಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಸ್‌ಗಳ ನಡುವೆ ಭೀಕರ ಅಪಘಾತ – ಮಿನಿ ಬಸ್ ಛಿದ್ರ

Share This Article