ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್

Public TV
1 Min Read

– ಡಿ.ಕೆ.ಶಿವಕುಮಾರ್ ಲಕ್ಕಿ ಬೈಕ್ ಹೇಗಿದೆ ನೋಡಿ..

– ಬೈಕ್‌ ರಿಪೇರಿಗೆ 2 ಲಕ್ಷ ರೂ. ಖರ್ಚು

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಾವು ಓಡಿಸುತ್ತಿದ್ದ 1981 ರ ಮಾಡೆಲ್ ಹಳೇ ಎಝಡಿ (Yezdi) ರೋಡ್ ಕಿಂಗ್ ಬೈಕ್‌ಗೆ ಹೊಸ ರೂಪ ಕೊಟ್ಟಿದ್ದಾರೆ.

43 ವರ್ಷದ ಹಳೇಯದಾದ 1981ರ ಮಾಡೆಲ್‌ನ ಸಿಎಇ 7684 ನಂಬರಿನ ಎಝಡಿ ರೋಡ್ ಕಿಂಗ್ ಬೈಕ್ ಅವರ ಮನೆಯಲ್ಲಿತ್ತು. ಈ ಬೈಕ್ ಅವರು ವಿದ್ಯಾರ್ಥಿ ಜೀವನ ಹಾಗೂ ವಿದ್ಯಾರ್ಥಿ ಕಾಂಗ್ರೆಸ್‌ನ (Congress) ರಾಜಕೀಯ ಚಟುವಟಿಕೆಗಳಿಗೆ ಡಿಕೆಶಿ ಬಳಸುತ್ತಿದ್ದರು. ಇಂದಿಗೂ ಈ ಬೈಕ್ ಡಿಕೆಶಿ ಪಾಲಿಗೆ ಲಕ್ಕಿ ಬೈಕ್ ಎನಿಸಿಕೊಂಡಿದೆ.  ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

ತಮ್ಮ ವಿದ್ಯಾರ್ಥಿ ಜೀವನಕ್ಕೆ ಸಾಕ್ಷಿಯಾಗಿದ್ದ ಅವರ ಈ ಬೈಕನ್ನು ಕಳೆದ ಮೂವತ್ತು ವರ್ಷಗಳಿಂದ ಹಾಗೆಯೇ ನಿಲ್ಲಿಸಿದ್ದರು. ನಿಲ್ಲಿಸಿದ್ದಲ್ಲಿಯೇ ಎಝಡಿ ರೋಡ್ ಕಿಂಗ್ ತುಕ್ಕು ಹಿಡಿದಿತ್ತು. ತುಕ್ಕು ಹಿಡಿದ ತಮ್ಮ ಲಕ್ಕಿ ಬೈಕ್‌ಗೆ ವಿಂಟೇಜ್ ಬೈಕ್ ಸಿದ್ಧಪಡಿಸುವ ಕ್ರೇಜ್ ಹೊಂದಿರುವ ಸುಪ್ರೀತ್ ಅವರಿಂದ ಈಗ ಹೊಸ ರೂಪ ಕೊಡಲಾಗಿದೆ. ಇದನ್ನೂ ಓದಿ: ದರ್ಶನ್‌ಗೆ ಬೆನ್ನುನೋವು – ಜೈಲು ವೈದ್ಯರಿಂದ ನಟನ ಆರೋಗ್ಯ ತಪಾಸಣೆ

ದೇಶದ ವಿವಿಧ ಭಾಗ ಹಾಗೂ ವಿದೇಶದಿಂದ ಬೈಕಿನ ಕೆಲ ಬಿಡಿ ಭಾಗಗಳನ್ನು ಆಮದು ಮಾಡಿಸಿಕೊಂಡು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಡಿಕೆಶಿ ತಮ್ಮ ಕಾಲೇಜು ದಿನಗಳಲ್ಲಿ ಓಡಾಡುತ್ತಿದ್ದ ಬೈಕ್ ರಿಪೇರಿ ಮಾಡಿಸಿದ್ದಾರೆ.

43 ವರ್ಷದ ಹಳೆಯ ತಮ್ಮ ವಿದ್ಯಾರ್ಥಿ ಜೀವನದ ಫೇವರೇಟ್ ಬೈಕ್ ಮನೆ ಒಳಗೆ ಮರ ಹಾಗೂ ಗ್ಲಾಸ್‌ನ ಫ್ರೇಮ್ ಮಾಡಿಸಿ ಶೋ ಪೀಸ್ ಮಾಡಿ ಇಟ್ಟುಕೊಳ್ಳಲು ಡಿಕೆಶಿ ತೀರ್ಮಾನಿಸಿದ್ದಾರೆ. ಇದು ನನ್ನ ರಾಜಕೀಯ ಜೀವನಕ್ಕೆ ಹೊಸ ತಿರುವು ನೀಡಿದ ಲಕ್ಕಿ ಬೈಕ್ ಎಂದು ಡಿಕೆಶಿ ತಮ್ಮ ಅಪ್ತರ ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಯಾವತ್ತಿಗೂ ಟಗರೇ, ಭಯ ಬೀಳೋ ಪ್ರಶ್ನೆನೇ ಬರಲ್ಲ: ಜಮೀರ್

Share This Article