ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ

Public TV
2 Min Read

ಕೊಪ್ಪಳ: ಇಲ್ಲಿನ ಗವಿ ಮಠ (Gavi Math) ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಮುಸ್ಲಿಂ ಮಹಿಳೆಯೊಬ್ಬರು (Muslim Woman) ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತು ಗಮನಸೆಳೆದಿದ್ದಾರೆ.

ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ನಾಗ ದೇವರ ಮುಂದೆ ಧ್ಯಾನಕ್ಕೆ ಕುಳಿತ ಮಹಿಳೆ. ಹಸೀನಾ ಬೇಗಂ ಕಳೆದ ಎಂಟು ದಿನಗಳಿಂದ ಗವಿ ಮಠಕ್ಕೆ ಬಂದು ದ್ಯಾನ ಮಾಡುತ್ತಿದ್ದಾರೆ. ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿದ್ದಾರೆ. 90%ನಷ್ಟು ಹಿಂದೂ ಧರ್ಮದವರು ಗವಿ ಮಠಕ್ಕೆ ಬರುತ್ತಾರೆ. ಆದರೆ ಆವರಣದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಅಂಗಡಿ ಬಳಿ ಕುಳಿತವನ ಮೇಲೆ ಡೆಡ್ಲಿ ಅಟ್ಯಾಕ್ – ಚಿಕಿತ್ಸೆ ಫಲಿಸದೇ ಯುವಕ ಸಾವು

ಹಸೀನಾ ಬೇಗಂ ಮಾನಸಿಕ ನೆಮ್ಮದಿಗಾಗಿ ಇಲ್ಲಿ ಧ್ಯಾನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಗವಿ ಮಠದ ಶ್ರೀಗಳು ನಿತ್ಯ ಸಂಜೆ ಸಮಯದಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಹಸೀನಾ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಒಟ್ಟು 11 ಧ್ಯಾನ ಮಾಡೋದಾಗಿ ಬೇಡಿಕೊಂಡಿರೋ ಹಸಿನಾ ಬೇಗಂ, ನಾಗದೇವರ ಮುಂದೆ ನಿತ್ಯ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಸೀನಾ ಬೇಗಂ, ನನ್ನ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಇಲ್ಲಿ ಧ್ಯಾನಕ್ಕೆ ಕೂರುತ್ತೇನೆ ಎಂದು ಗವಿಮಠದ ಶ್ರೀಗಳನ್ನು ಕೇಳಿದ್ದೆ. ನಿನ್ನ ಮನಸ್ಸಿಗೆ ನೆಮ್ಮದಿ ಸಿಗುವುದಾದರೆ ಕೂರು ಎಂದು ಹೇಳಿದ್ದರು. ನಾನು 2013ರಿಂದ ಮಠಕ್ಕೆ ಬರುತ್ತಿದ್ದೇನೆ. ನನಗೆ ಸಮಯ ಸಿಕ್ಕಾಗೆಲ್ಲ ಇಲ್ಲಿಗೆ ಬಂದು 10 ನಿಮಿಷ ಕುಳಿತುಕೊಂಡು ಹೋಗುತ್ತೇನೆ. ನನಗೆ ಕಷ್ಟ ಇತ್ತು, ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಎಂಟು ದಿನಗಳ ಹಿಂದೆ ನನಗೆ ನಿಲ್ಲಲು ಆಗುತ್ತಿರಲಿಲ್ಲ. ನಾನು ಇಲ್ಲಿಗೆ ಬಂದ ವೇಳೆ ಜೋರು ಮಳೆ ಬರುತ್ತಿತ್ತು. ಆ ಮಳೆಯಲ್ಲೇ ಧ್ಯಾನಕ್ಕೆ ಕುಳಿತುಕೊಂಡೆ. ಇವತ್ತು ನನ್ನ ಮನಸ್ಸಿಗೆ ನೆಮ್ಮದಿ ಅನಿಸಿದೆ. ಹಿಂದೂ-ಮುಸ್ಲಿಂ ಅನ್ನೋದು ನನ್ನಲಿಲ್ಲ. ಇದು ನಮ್ಮ ಮಠ. ನನಗೆ ಬಹಳ ನೋವಾಗಿತ್ತು. ಶ್ರೀಗಳು ಕೂರುವ ಜಾಗದ ಎದುರಿನ ಜಾಗ ನನಗೆ ಬಹಳ ಇಷ್ಟ ಆಯಿತು. ಅದಕ್ಕೆ ಅಲ್ಲೇ ಧ್ಯಾನಕ್ಕೆ ಕುಳಿತೆ. ಪ್ರತಿನಿತ್ಯ ಒಂದು ಗಂಟೆ ಧ್ಯಾನಕ್ಕೆ ಕುಳಿತುಕೊಳ್ಳುತ್ತೇನೆ. ಸೋಮವಾರದ ತನಕ ಧ್ಯಾನ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ: ನಿಖಿಲ್‌ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?

Share This Article