ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಪ್ರಾಪ್ತ ಬಾಲಕ

Public TV
1 Min Read

ಮಂಗಳೂರು: ಅಪ್ರಾಪ್ತ ಬಾಲಕನೊಬ್ಬ ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮಂಗಳೂರು ಹೊರವಲಯದ ಕೋಟೆಕಾರು ಬಳಿಯ ಪಾನೀರು ಎಂಬಲ್ಲಿ ನಡೆದಿದೆ.

ಜರ್ಮನ್ ಮೂಲದ 18 ವರ್ಷದ ಯುವತಿ ಮೇಲೆ 16 ವರ್ಷದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪಾನೀರು ಚರ್ಚ್ ಅಧೀನದ ಮರ್ಸಿ ಡೇ ಎಂಬ ಅನಾಥ ಮಕ್ಕಳ ಆಶ್ರಮಕ್ಕೆ ಅಧ್ಯಯನಕ್ಕಾಗಿ ಯುವತಿ ಆಗಮಿಸಿದ್ದರು. ಸಂಜೆ ವೇಳೆಯಲ್ಲಿ ಪಾನೀರು ಚರ್ಚ್ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಕೊಣಾಜೆ ಪಾವೂರು ನಿವಾಸಿ 16ರ ಬಾಲಕ ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಗಾಬರಿಗೊಂಡ ಯುವತಿ ಬಾಲಕನಿಂದ ತಪ್ಪಿಸಿಕೊಂಡು ಆಶ್ರಮದತ್ತ ಓಡಿದ್ದಾರೆ. ಕೂಡಲೇ ಸ್ಥಳೀಯರು ಸೇರಿ ಆರೋಪಿಗೆ ಧರ್ಮದೇಟು ನೀಡಿ ಉಳ್ಳಾಲ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *