ಕುಮಾರಸ್ವಾಮಿ, ಯಡಿಯೂರಪ್ಪ ಕಾಂಗ್ರೆಸ್‍ನಿಂದ ಸಿಎಂ ಆದೆ ಅಂತ ಹೇಳಬೇಕು: ಎ.ಮಂಜು

Public TV
1 Min Read

ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ನಾನು ದೇವರ ಆಶೀರ್ವಾದದಿಂದ ಸಿಎಂ ಆದೆ ಎನ್ನುತ್ತಾರೆ. ಆದರೆ ದೇವರಲ್ಲ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಅವರಿಂದ ಸಿಎಂ ಆದೆ ಅಂತ ಹೇಳಬೇಕು ಎಂದು ಮಾಜಿ ಸಚಿವ ಎ.ಮಂಜು ಕಿಡಿಕಾರಿದರು.

ಹಾಸನನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್‍ಡಿಕೆ ನಡುವಿನ ವಾಕ್ಸಮರ ವಿಚಾರವಾಗಿ ಹೇಳಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಪುಟಗೋಸಿ ಎಂಬ ಪದಬಳಕೆಯನ್ನು ಕುಮಾರಸ್ವಾಮಿ ಅವರು ಬಳಸಿರುವುದು ಬೇಸರವಾಗಿದೆ. ಇಂತಹ ಪದ ಬಳಕೆ ಮಾಡುವಂತದ್ದು ಒಳ್ಳೆಯದಲ್ಲ ಎಂದರು. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

ಕುಮಾರಸ್ವಾಮಿ ಅವರು ಇದನ್ನು ನಿಲ್ಲಿಸದೆ ಹೋದರೆ ಎಲ್ಲರಿಗೂ ಅವಮಾನ. ಇಂತಹ ಪದ ಬಳಸಿದ್ದರಿಂದಲೇ ಮಂಡ್ಯದಲ್ಲಿ ನಿಖಿಲ್ ಸೋತಿದ್ದು. ಜನರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮಾತನಾಡಬೇಕಾದರೆ ಯೋಚನೆ ಮಾಡಿ ಮಾತನಾಡಬೇಕು ಎಂದು ಸೂಚಿಸಿದರು.


ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿರುವುದು ತಪ್ಪು. ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿ ಇದ್ದಿದ್ದರಿಂದಲೇ 58 ಸೀಟ್ ಬಂದಿದ್ದು. ಯಡಿಯೂರಪ್ಪ ಅವರ ಸಹಕಾರ, ಆಶೀರ್ವಾದದಿಂದ ಕಳೆದ ಬಾರಿ ನಲವತ್ತು ಸೀಟ್ ಬಂತು. ಕುಮಾರಸ್ವಾಮಿ ಅವರ ಹೇಳಿಕೆ ಹಾಸನ ಜಿಲ್ಲೆ, ರಾಜ್ಯಕ್ಕೆ ಅವಮಾನ. ಅವರು ನಾನು ದೇವರ ಆಶೀರ್ವಾದದಿಂದ ಮುಖ್ಯಮಂತ್ರಿ ಆದೆ ಎನ್ನುತ್ತಾರೆ. ಆದರೆ ದೇವರು ಅಲ್ಲ ಯಡಿಯೂರಪ್ಪ ಅವರಿಂದ ಸಿಎಂ ಆದೆ ಅಂತ ಹೇಳಬೇಕು. ಕಾಂಗ್ರೆಸ್ ಪಕ್ಷದಿಂದ ಸಿಎಂ ಆದೆ ಅಂತ ಹೇಳಬೇಕು ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

Share This Article
Leave a Comment

Leave a Reply

Your email address will not be published. Required fields are marked *