ತೆಪ್ಪ ಮಗುಚಿಬಿದ್ದು ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವು

Public TV
1 Min Read

ದಾವಣಗೆರೆ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಜಗಳೂರು (Jagalur) ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಿತ್ತೂರು ಗ್ರಾಮದ ನಿವಾಸಿ ಮೂರ್ತಿ (40) ಮೃತ ದುರ್ದೈವಿ. ಮೂರ್ತಿ ನಿತ್ಯ ಮೀನು (Fish) ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅದೇ ರೀತಿ ಎಂದಿನಂತೆ ಮೂರ್ತಿ ಮೀನು ಹಿಡಿಯಲು ತೆಪ್ಪದಲ್ಲಿ (Raft) ಹೋಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತೆಪ್ಪ ಮಗುಚಿ ಬಿದ್ದು ಮೀನಿಗೆ ಹಾಕಿದ್ದ ಬಲೆ ಕಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ – ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ

ಮೀನಿನ ಬಲೆ ಕಾಲಿಗೆ ಸಿಲುಕಿದ ಹಿನ್ನೆಲೆ ಮೂರ್ತಿ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು ಮೂರ್ತಿ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಬಿಳಚೋಡು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿಶ್ವಪ್ರಸಿದ್ಧ ಯಾಣದಲ್ಲಿ ದೇಶದ ಮೊದಲ WiFi-7 ಸೇವೆ

Share This Article