ನಡುರಸ್ತೆಯಲ್ಲೇ ಯುವತಿಯ ತುಟ್ಟಿ ಕಚ್ಚಿ ಎಸ್ಕೇಪ್ ಆಗಿದ್ದ ಬೀದಿ ಕಾಮುಕ ಅರೆಸ್ಟ್

Public TV
1 Min Read

ಬೆಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಯುವತಿಯ ತುಟ್ಟಿ ಕಚ್ಚಿ ಎಸ್ಕೇಪ್ ಆಗಿದ್ದ ಬೀದಿ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಮನವಿ – ಕೇಂದ್ರ ವಿಮಾನಯಾನ ಸಚಿವರೊಂದಿಗೆ ಎಂಬಿಪಿ ಮಾತುಕತೆ

ಬೆಂಗಳೂರಿನಂತ ಜನದಟ್ಟಣೆಯುಳ್ಳ ಪ್ರದೇಶದಲ್ಲಿ ಕಾಮುಕನೋರ್ವ ನಡುರಸ್ತೆಯಲ್ಲೇ ಹುಚ್ಚಾಟ ಮಾಡಿದ್ದಾನೆ. ಅಂಗಡಿಗೆ ರೇಷನ್ ತರಲು ಹೋಗಿದ್ದ ಯುವತಿಯನ್ನು ಹಿಂಬಾಲಿಸಿ ಅಸಭ್ಯ ವರ್ತನೆ ತೋರಿ ಆಕೆಯ ತುಟಿ ಕಚ್ಚಿದ್ದ. ಜೊತೆಗೆ ಲೈಂಗಿಕವಾಗಿ ಕಿರುಕುಳ ನೀಡಿ ಎಸ್ಕೇಪ್ ಆಗಿದ್ದ. ಮನೆಗೆ ಹೋದ ಯುವತಿ ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಬಳಿಕ ಯುವತಿ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರಿನ ಆಧಾರದ ಮೇಲೆ ಆರೋಪಿ ಪತ್ತೆಗಾಗಿ ಇಳಿದ ಪೊಲೀಸರು, ಸದ್ಯ ಕಾಮುಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: WWE ಲೆಜೆಂಡ್‌, ಕುಸ್ತಿಪಟು ಹಲ್ಕ್ ಹೊಗನ್ ನಿಧನ

Share This Article