ನನ್ನ ನೋಡಿ ಬೊಗಳುತ್ತೆ – ನಾಯಿಯನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದ

Public TV
1 Min Read

ದೊಡ್ಡಬಳ್ಳಾಪುರ: ನಾಯಿ ತನ್ನ ನೋಡಿ ಬೊಗಳುತ್ತದೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಏರ್ ಗನ್‍ನಿಂದ ಶೂಟ್ ಮಾಡಿದ್ದು, ಈ ದಾಳಿಯಲ್ಲಿ 5 ವರ್ಷದ ರಾಕಿ (Rockey) ಎಂಬ ಹೆಸರಿನ ಬೀದಿ ನಾಯಿ (Street Dog) ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ.

ಮಾದಗೊಂಡನಹಳ್ಳಿ ನಿವಾಸಿ ಹರೀಶ್ ಅವರು ಬೀದಿ ನಾಯಿ ರಾಕಿಯನ್ನು ಸಾಕಿದ್ದರು. ಇದೇ ಗ್ರಾಮದ ಕೃಷ್ಣಪ್ಪ ಎಂಬಾತ ನಾಯಿ ರಾಕಿ ತನ್ನನ್ನು ನೋಡಿ ಬೊಗಳಿತೆಂದು ಏರ್ ಗನ್‍ನಿಂದ (Air Gun) ಶೂಟ್ ಮಾಡಿದ್ದಾನೆ. ಈ ವೇಳೆ ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನು ರಾಗಿಯ ಹೊಲದಲ್ಲಿ ಅಟ್ಟಾಡಿಸಿಕೊಂಡು ಶೂಟ್ ಮಾಡಿದ್ದಾನೆ. ಏಳೆಂಟು ಗುಂಡೇಟು ತಿಂದ ರಾಕಿ ಕೊನೆಗೆ ಸಾವನ್ನಪ್ಪಿದೆ ಎಂದು ಹರೀಶ್ (Harish) ಆರೋಪಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಮತ್ತೆ ಘರ್ಜಿಸಲಿದೆ ಬುಲ್ಡೋಜರ್; ಮಾರ್ಕಿಂಗ್‌ಗೆ ಪೇಂಟಿಂಗ್ ಮಾಡಿರೋ ಕಿಡಿಗೇಡಿಗಳು

ಈ ಕುರಿತು ನಾಯಿ ಕೊಂದಿದ್ದೇಕೆಂದು ಕೇಳಲು ಹೋದರೆ, ಕೃಷ್ಣಪ್ಪ ನನ್ನ ಮಗನನ್ನು ಕಚ್ಚಿದೆ, ಅದಕ್ಕೆ ನಾಯಿಯ ಕೊಂದೆ. ಬೇಕಿದ್ದರೆ ಕಂಪ್ಲೇಂಟ್ (Complaint) ಕೊಟ್ಟು ಕಾನೂನು ಕ್ರಮಕೈಗೊಳ್ಳುವಂತೆ ಹೇಳಿದ್ದಾನೆ ಎಂದು ಹರೀಶ್ ದೂರಿದ್ದಾರೆ. ಸ್ಥಳಕ್ಕೆ ಪ್ರಾಣಿ, ಪಕ್ಷಿ ದಾಸೋಹ ಟ್ರಸ್ಟ್‌ನವರು ಭೇಟಿ ನೀಡಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಿಸಲಾಗಿದೆ. ಇನ್ನೂ ಮೃತ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ(Funeral) ಸಹ ಜರುಗಿಸಲಾಗಿದೆ. ಇದನ್ನೂ ಓದಿ: ವಿಮ್ಸ್ ದುರಂತ: ಇಂದು ಸಚಿವ ಸುಧಾಕರ್ ಭೇಟಿ – ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎಂದ ಶ್ರೀರಾಮುಲು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *