ಇಸ್ಲಾಂಗೆ ಮತಾಂತರವಾಗುವಂತೆ ವೈದ್ಯನಿಂದ ಕಿರುಕುಳ – ಉಡುಪಿಯಲ್ಲಿ ಆರೋಪಿ ಬಂಧನ

By
1 Min Read

ಉಡುಪಿ: ಇಸ್ಲಾಂಗೆ ಮತಾಂತರವಾಗುವಂತೆ (Conversion) ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಡ್ಯಾನಿಷ್ ಖಾನ್ (27) ಬಂಧಿತ ಆರೋಪಿ. ಮಣಿಪಾಲ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಆರೋಪಿ ವಿರುದ್ಧ ದೂರು ನೀಡಿದ್ದರು. ಈ ವಿದ್ಯಾರ್ಥಿನಿಯರು ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಡೆಲ್ಲಿ ಮತ್ತು ರಾಜಸ್ಥಾನದಿಂದ ಬಂದಿದ್ದರು. ಇದನ್ನೂ ಓದಿ: ಈ ಸರ್ಕಾರ ಪಾಪರ್ ಸರ್ಕಾರ- ಗುಂಡಿ ಮುಚ್ಚೋಕು ಕಾಸಿಲ್ಲ: ಅಶೋಕ್ ಕಿಡಿ

ಯುವತಿಗೆ ಪ್ರೀತಿಸಿ, ಮದುವೆಯಾಗುವ ಪ್ರಸ್ತಾಪವನ್ನು ಆರೋಪಿ ಡ್ಯಾನಿಷ್ ಮುಂದಿಟ್ಟಿದ್ದ. ಇಸ್ಲಾಂಗೆ ಮತಾಂತರವಾಗಬೇಕೆಂದು ಷರತ್ತು ವಿಧಿಸಿದ್ದ. ಷರತ್ತು ಒಪ್ಪದ್ದಕ್ಕೆ ಬೆದರಿಕೆ, ಹಲ್ಲೆ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಉಡುಪಿ ಮಹಿಳಾ ಠಾಣೆಯಲ್ಲಿ ಆ.31 ರಂದು ದೂರು ದಾಖಲಾಗಿತ್ತು.

ಮಹಮ್ಮದ್ ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಕ್ಯಾಂಪಸ್‌ನಲ್ಲಿ ಪರಿಚಯವಾಗಿ, ಆತ ಈಕೆಯ ಫೋನ್ ನಂಬರ್ ಪಡೆದುಕೊಂಡು ಗೆಳೆತನವಾಗಿತ್ತು. 2024 ರ ಜನವರಿ 22 ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾಗಿ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ನಾನು ಛಲವಾದಿ, ನನ್ನ ವಿರುದ್ಧ ದೂರು ಕೊಟ್ಟರೂ ನಾನು ಹೆದರಲ್ಲ: ಛಲವಾದಿ ನಾರಾಯಣಸ್ವಾಮಿ

2024 ರ ಮಾ.11 ರಂದು ಸಂತ್ರಸ್ತೆ ಆರೋಪಿಯ ರೂಮ್‌ಗೆ ತೆರಳಿದಾಗ ಮತಾಂತರಕ್ಕೆ ಒತ್ತಾಯಿಸಿದ್ದ. ನಿರಾಕರಿಸಿದಾಗ ಆರೋಪಿಯು ತನ್ನ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಿದ್ದ. ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕ ಕುರುಕುಳ ಕೊಟ್ಟು, ಬೇಡಿಕೆ ಇಟ್ಟಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.

2024 ರ ಆಗಸ್ಟ್ 28 ರವರೆಗೂ ಫೋನ್‌ನಲ್ಲಿ ತನ್ನನ್ನು ಸಂಪರ್ಕಿಸಿ ನಿರಂತರ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಪ್ರಕರಣದ ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

Share This Article