ಲಾಬಿ ಎಟಿಎಂ ಮಷಿನ್‌ನಲ್ಲಿ ಹಣ ಹಾಕಲು ಬಂದು 39,500 ರೂ. ಕಳೆದುಕೊಂಡ ವ್ಯಕ್ತಿ

Public TV
1 Min Read

ಹಾಸನ: ಲಾಬಿ ಎಟಿಎಂ ಮಷಿನ್‌ನಲ್ಲಿ ಹಣ ಹಾಕಲು ಬಂದು ವ್ಯಕ್ತಿಯೊಬ್ಬ ತನ್ನ ಬೇಜವಾಬ್ದಾರಿತನದಿಂದ ಹಣ ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಸೋಹಲ್‌ಲಾಲ್ ಹಣ ಕಳೆದುಕೊಂಡ ವ್ಯಕ್ತಿ. ಲಾಬಿ ಮಷಿನ್‌ನಲ್ಲಿ ಡೆಪಾಸಿಟ್ ಆಗದೆ ವಾಪಾಸ್ ಬಂದ ಹಣವನ್ನು ತೆಗೆದುಕೊಂಡು ಎಸ್ಕೇಪ್ ಆದ ಇಬ್ಬರು ಅಪರಿಚಿತ ವ್ಯಕ್ತಿಗಳು

ಆಕ್ಸಿಸ್ ಬ್ಯಾಂಕ್‌ನ ಲಾಬಿ ಮಷಿನ್‌ಗೆ ನಲವತ್ತು ಸಾವಿರ ಹಣ ಹಾಕಲು ಸೋಹಲ್ ಬಂದಿದ್ದ. ಈ ವೇಳೆ ಮಿಷನ್‌ನಿಂದ 500 ರೂ. ನೋಟು ಹೊರಗೆ ಬಂದಿದೆ. 39,500 ಹಣವನ್ನು ಲಾಬಿ ಮಷಿನ್‌ಗೆ ಹಾಕಿ ಡೆಪಾಸಿಟ್ ಆಗಿದೆ ಎಂದು ತಿಳಿದು ನೋಟು ಬದಲಿಸಿಕೊಳ್ಳಲು ಬ್ಯಾಂಕ್‌ಗೆ ಸೋಹಲ್ ಹೋಗಿದ್ದ.

ಇದೇ ವೇಳೆ ಅದೇ ಎಟಿಎಂಗೆ ಬಂದ ಇಬ್ಬರು ಅಪರಿಚಿತರು, ಲಾಬಿ ಮಷಿನ್‌ನಿಂದ ವಾಪಾಸ್ ಹೊರಗೆ ಬಂದ 39500 ರೂ. ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಹಣ ಬಂದಿದ್ದನ್ನು ಕಂಡ ಕೂಡಲೇ ಎತ್ತಿಕೊಂಡು ಅಪರಿಚಿತರು ಪರಾರಿಯಾಗಿದ್ದಾರೆ.

ಅಪರಿಚಿತರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article