ಪತ್ನಿಯನ್ನು ಪುಸಲಾಯಿಸಿ ದೇವಸ್ಥಾನಕ್ಕೆ ಕರೆದೊಯ್ದ – ಕೊಲೆ ಮಾಡಿ ಅರಣ್ಯ ಪ್ರದೇಶಕ್ಕೆ ಶವ ಎಸೆದ

Public TV
1 Min Read

ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿ ಹತ್ಯೆಯಾದ ಘಟನೆ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಡೆದಿದೆ.

ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ವಿಚ್ಛೇದನ ಪಡೆಯಲು ದಂಪತಿ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಮಾಗಡಿ ಕೋರ್ಟ್‌ಗೆ ದಂಪತಿ ಹಾಜರಾಗಿದ್ದರು. ಇದನ್ನೂ ಓದಿ: ಹುಡ್ಗಿ ವಿಚಾರಕ್ಕೆ ಕಿರಿಕ್‌ – ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಾರಾಮಾರಿ

ಬಳಿಕ ಡ್ರಾಮಾ ಮಾಡಿ ಪತ್ನಿಯನ್ನು ದೇವಸ್ಥಾನಕ್ಕೆಂದು ಹೂಜಗಲ್ಲು ಬೆಟ್ಟಕ್ಕೆ ಕರೆದೊಯ್ದ ಉಮೇಶ್, ಪೂಜೆ ಮಾಡುವ ವೇಳೆ ಪತ್ನಿ ದಿವ್ಯಾಳ ಹತ್ಯೆ ಮಾಡಿದ್ದಾನೆ. ಶವವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯವೆಸಗಿ ಪರಾರಿಯಾಗಿದ್ದ ಪತಿ ಉಮೇಶ್ ಸೇರಿ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

Share This Article