ಮಂಗಳೂರು| ಹೆತ್ತ ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಪಾಪಿ ಮಗ

By
1 Min Read

ಮಂಗಳೂರು: ಹೆತ್ತ ತಾಯಿಯನ್ನೇ ಕೊಲೆಗೈದು ಪುತ್ರ ಸುಟ್ಟು ಹಾಕಿರುವ ಘಟನೆ ಮಂಗಳೂರು ಗಡಿಭಾಗ ಕಾಸರಗೋಡಿನ ವರ್ಕಾಡಿಯಲ್ಲಿ ನಡೆದಿದೆ.

ನಲ್ಲೆಂಗಿಯ ಹಿಲ್ಡಾ ಮೊಂತೇರೊ (59) ಕೊಲೆಗೀಡಾದ ದುರ್ದೈವಿ. ಮೆಲ್ವಿನ್ ಮೊಂತೇರೊ (26) ಕೃತ್ಯ ಎಸಗಿರುವ ಆರೋಪಿ ಮಗ. ಘಟನೆಯಲ್ಲಿ ನೆರೆಮನೆಯ ಲೋಲಿಟಾ ಎಂಬವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ.

ಮೃತ ಹಿಲ್ಡಾ ಪುತ್ರ ಮೆಲ್ವಿನ್ ಮೊಂತೆರೋ‌ನೊಂದಿಗೆ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಹಿಲ್ಡಾರನ್ನು ಮುಂಜಾನೆ ಕೊಲೆಗೈದು, ಮೃತದೇಹವನ್ನು ಮನೆಯ ಹಿಂಬದಿಗೆ ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ನೋಡಲು ಬಂದ ನೆರೆ ಮನೆಯವರಿಗೂ ಬೆಂಕಿ ಹಚ್ಚಿದ್ದ. ಆರೋಪಿ ಮೆಲ್ವಿನ್ ಮೊಂತೆರೋನನ್ನು ಕುಂದಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಾದಕ ವ್ಯಸನಿಯಾಗಿದ್ದ ಮೆಲ್ವಿನ್ ಮೊಂತೆರೋ, ನಶೆಯಲ್ಲಿ ಕೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

Share This Article