ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

By
1 Min Read

ಬೆಂಗಳೂರು: ಲೇಡಿಸ್ ಪಿ.ಜಿಗೆ ನುಗ್ಗಿ ಯುವತಿಯ ಮೈ ಕೈ ಮುಟ್ಟಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಘಟನೆ ಬಿಟಿಎಂ ಲೇಔಟ್‌ನ (BTM Layout) ಪಿ.ಜಿಯಲ್ಲಿ ನಡೆದಿದೆ.

ಆ.29 ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಪಿ.ಜಿಗೆ ನುಗ್ಗಿದ್ದ ಅಪರಿತ ವ್ಯಕ್ತಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಯುವತಿಯನ್ನ ಎಳೆದಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನೂ ಓದಿ: Uttar Pradesh | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ದುರ್ಮರಣ, ಐವರಿಗೆ ಗಾಯ

ಸದ್ದುಗುಂಟೆಪಾಳ್ಯ (Sadduguntepalya) ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸಾಮಿಯು ಯುವತಿಯ ರೂಮ್‌ಗೆ ನುಗ್ಗಿದಾಗ ಆಕೆ ರೂಮ್‌ಮೇಟ್ ಇರಬಹುದು ಅಂದುಕೊಂಡಿದ್ದಳು. ಕಾಮುಕನೂ ಮೊದಲೇ ಪಿಜಿ ಫ್ಲೋರ್‌ನ ಎಲ್ಲಾ ರೂಮ್ ಡೋರ್‌ಗಳನ್ನು ಲಾಕ್ ಮಾಡಿ ಯುವತಿ ಬಳಿ ಹೋಗಿ ಆಕೆಯ ಕೈ ಕಾಲು ಮುಟ್ಟಿದ್ದಾನೆ. ಯುವತಿಗೆ ಎಚ್ಚರವಾಗಿ ಗಾಬರಿಯಿಂದ ಕಿರುಚಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದಾಳೆ. ಇದನ್ನೂ ಓದಿ: ʻಬಿಗ್ ಬಾಸ್ ಸೀಸನ್‌-12ʼನ ಬಿಗ್‌ ನ್ಯೂಸ್‌ – ಲಾಂಚ್‌ ಡೇಟ್‌ ಅನೌನ್ಸ್‌ ಮಾಡಿದ ಕಿಚ್ಚ ಸುದೀಪ್

ಈ ವೇಳೆ ಪ್ರತಿರೋಧ ಒಡ್ಡಿ, ಕೂಗಾಡಿ ಹೊರ ಬಂದಿದ್ದ ಯುವತಿಯ ಕಪಾಳಕ್ಕೆ ಹೊಡೆದು, ಆಕೆಯನ್ನು ಎಳೆದಾಡಿ ಕಾಮುಕ ಎಸ್ಕೇಪ್ ಆಗಿದ್ದಾನೆ.

Share This Article