ವರದಕ್ಷಿಣೆ ದುರಾಸೆಗೆ 2ನೇ ಮದುವೆಗೆ ರೆಡಿಯಾಗಿದ್ದ ವ್ಯಕ್ತಿಗೆ ಪತ್ನಿಯಿಂದ ಚಪ್ಪಲಿ ಏಟು

Public TV
1 Min Read

– ಕಲ್ಯಾಣ ಮಂಟಪದಲ್ಲೇ ಪತಿಗೆ ಗೂಸಾ ಕೊಟ್ಟ ಪತ್ನಿ

ಚಿತ್ರದುರ್ಗ: ವರದಕ್ಷಿಣೆ ದುರಾಸೆಗೆ 2ನೇ ಮದುವೆಗೆ ಸಿದ್ಧವಾಗಿದ್ದ ವ್ಯಕ್ತಿಗೆ ಕಲ್ಯಾಣ ಮಂಟಪದಲ್ಲೇ ಪತ್ನಿ ಚಪ್ಪಲಿಯಿಂದ ಹೊಡೆದಿರುವ ಘಟನೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ ಎಂಬಾತ ಧರ್ಮದೇಟು ತಿಂದ ವ್ಯಕ್ತಿ. ತನ್ನ ಪತಿ ಎರಡನೇ ಮದುವೆಯಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಧಾವಿಸಿದ ಮಹಿಳೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ.

ಘಟನೆಯಿಂದ ಮದುವೆ ವೇಳೆ 2ನೇ ವಧು ಮತ್ತು ಕುಟುಂಬಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ. 4 ವರ್ಷದ ಹಿಂದೆಯೇ ಕಾರ್ತಿಕ್‌ಗೆ ಮದುವೆಯಾಗಿತ್ತು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ಯುವತಿ ಜೊತೆ ಮದುವೆಯಾಗಿತ್ತು.

ಆದರೂ, ಚಿತ್ರದುರ್ಗದಲ್ಲಿ ಎರಡನೇ ಮದುವೆಗೆ ಕಾರ್ತಿಕ್ ಪ್ಲ್ಯಾನ್‌ ಮಾಡಿದ್ದ. ಸುದ್ದಿ ತಿಳಿದು ಕಲ್ಯಾಣ ಮಂಟಪಕ್ಕೇ ಬಂದು ಪತಿಗೆ ಧರ್ಮದೇಟು ಕೊಟ್ಟಿದ್ದಾಳೆ. ಕಾರ್ತಿಕ್ ಪತ್ನಿ ಕುಟುಂಬಸ್ಥರಿAದ 2ನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article