ನಾನು ಹೆಲ್ಮೆಟ್ ಹಾಕಲ್ಲ ಏನಿವಾಗ – ಜೆಡಿಎಸ್ ಅಧ್ಯಕ್ಷ ಎಂದವನ ಜೈಲಿಗಟ್ಟಿದ ಪೊಲೀಸರು

By
1 Min Read

ಬೆಂಗಳೂರು: ‘ನಾನು ಹೆಲ್ಮೆಟ್ ಹಾಕಲ್ಲ, ನೀವ್ಯಾರು ಕೇಳೋಕೆ. ನಿಮಗೆ ಇಲ್ಲಿ ಫೈನ್ ಹಾಕೋಕೆ ಪರ್ಮಿಷನ್ ಕೊಟ್ಟವರಾರು..?’ ಎಂದು ಟ್ರಾಫಿಕ್‌ ಪೊಲೀಸರ ಜೊತೆ ಉದ್ಧಟತನ ತೋರಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಲ್ಮೆಟ್‌ ಧರಿಸದೇ ಬೈಕ್‌ನಲ್ಲಿ ಬಂದ ಸವಾರನನ್ನು ಪೊಲೀಸರು ತಡೆದಿದ್ದಾರೆ. ಆಗ, ‘ನಾನು ಯಶವಂತಪುರ ಜೆಡಿಎಸ್ ಘಟಕದ ಅಧ್ಯಕ್ಷ. ಬೇಕು ಅಂತಲೇ ನಾನು ಹೆಲ್ಮೆಟ್ ಹಾಕದೆ ಬಂದೆ ಏನಿವಾಗ. ನಿಮ್ ಇನ್ಸ್ ಪೆಕ್ಟರ್‌ಗೆ ಇಲ್ಲಿ ಗಾಡಿ ಹಿಡಿಯಬಾರದು ಅಂತಾ ಅವತ್ತೇ ಹೇಳಿದ್ದೀನಿ’.. ಹೀಗೆ ಟ್ರಾಫಿಕ್ ಪೊಲೀಸರ ಜೊತೆ ಉದ್ಧಟತನ ತೋರಿದ ನವೀನ್‌ ಗೌಡ ಎಂಬ ವ್ಯಕ್ತಿಯನ್ನು ಜ್ಞಾನಭಾರತಿ ಪೊಲೀಸರು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಆಂಧ್ರ ಮಾಜಿ ಸಿಎಂ ಜಗನ್ ರ‍್ಯಾಲಿ ವೇಳೆ ಅವಘಡ – ಕಾರಿನಡಿ ಸಿಲುಕಿ ವೃದ್ಧ ಸಾವು

ಘಟನೆ ಏನು?
21 ನೇ ತಾರೀಖು ಉಳ್ಳಾಲ ಮುಖ್ಯರಸ್ತೆಯಲ್ಲಿ ಜ್ಞಾನಭಾರತಿ ಸಂಚಾರ ಠಾಣೆಯ ಎಸ್‌ಐ ಹಾಗೂ ಟೀಂ ವೆಹಿಕಲ್ ಚೆಕಿಂಗ್ ಮಾಡ್ತಿತ್ತು. ಈ ವೇಳೆ ಹೆಲ್ಮೆಟ್ ಇಲ್ಲದೇ ಬಂದ ನವೀನ್ ಗೌಡ ಇಲ್ಲೇ ನಿಲ್ಲಿಸ್ಬೇಕಾ..? ಫೈನ್ ಕಟ್ಟಲ್ಲ. ನಾನು ಹೆಲ್ಮೆಟ್ ಹಾಕಲ್ಲ. ನಿಮಗೆ ಗಾಡಿ ಹಿಡಿಯೋಕೆ ಪರ್ಮಿಷನ್ ಕೊಟ್ಟವರ‍್ಯಾರು? ನಾನು ಯಶವಂತಪುರ ಜೆಡಿಎಸ್ ಘಟಕದ ಅಧ್ಯಕ್ಷ. ಯಾರನ್ನ ಕರೆಸ್ತೀರೊ ಕರೆಸು ಅಂತಾ ಪೊಲೀಸರಿಗೆ ಆವಾಜ್ ಬಿಟಿದ್ದ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕವಾಗಿ ನಿಂದಿಸಿದ ಆರೋಪದ ಮೇಲೆ ಎಸ್‌ಐ ಕುಮಾರ್ ನೀಡಿದ ದೂರಿನ ಮೇಲೆ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ಆಗಿತ್ತು. ಸರ್ಕಾರಿ ಕೆಲಸಕ್ಕೆ ಅಡ್ಡಿ, ಸಾರ್ವಜನಿಕ ಅಧಿಕಾರಿಗೆ ನಿಂದನೆ ಆರೋಪದಲ್ಲಿ ಆರೋಪಿ ನವೀನ್ ಗೌಡನನ್ನ ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಪೊಲೀಸರು ಕರೆದೊಯ್ದಿದ್ದಾರೆ. ಇದನ್ನೂ ಓದಿ: ಕೃಷಿ ಹೊಂಡದಲ್ಲಿ ತಾಯಿ-ಮಗಳ ಶವ ಪತ್ತೆ; ಪತಿ, ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ

Share This Article