ಕಲರ್ಸ್ ಕನ್ನಡದ ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀಯಲ್ಲಿ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರವು ಪ್ರೇಕ್ಷಕರಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ. ಬರಲಿರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬವು ಅವನ ಮೇಲೆ ಮದುವೆಯ ಒತ್ತಡ ಹೇರುತ್ತದೆ. ಈ ದಿಸೆಯಲ್ಲಿ ಅವರು ಹುಡುಗಿಯನ್ನು ನೋಡಲು ಹೋಗುವರು. ಆ ಹುಡುಗಿಯೇ ಮೇಘಾಶ್ರೀ.
ಅವರ ಪ್ರವೇಶ ಧಾರಾವಾಹಿಗೆ ಹೊಸ ಕಸುವನ್ನು ನೀಡಲಿದೆಯಂತೆ. ಜೊತೆಗೆ ಭಾವನಾತ್ಮಕ ಮತ್ತು ಭಾವ ತೀವ್ರತೆ ಸೇರಿಸುವುದರ ಜೊತೆಗೆ, ಆದಿ ಮುಂದೇನು ಮಾಡುತ್ತಾನೆ ಎಂಬ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈ ಭೇಟಿಯು ಅವನ ಬದುಕಿನಲ್ಲಿ ಹೊಸ ತಿರುವು ತರುತ್ತದೆಯೇ ಅಥವಾ ಕುಟುಂಬದೊಳಗಿನ ಹೊಸ ಸಂಘರ್ಷಗಳಿಗೆ ಕಾರಣವಾಗುತ್ತದೆಯೇ ಎನ್ನುವ ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಮಾವಾಸ್ಯೆ ಯಾರು? – ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯ್ತು ಒಂದು ಹೇಳಿಕೆ
ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರತಿ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ. ಭಾಗ್ಯಲಕ್ಷ್ಮೀ ಕಂತುಗಳು ಕುತೂಹಲ ಹಾಗೂ ರೋಚಕತೆಯನ್ನು ಹೆಚ್ಚಿಸುವುದು ಖಚಿತ ಅಂತಾರೆ ಧಾರಾವಾಹಿಯ ಟೀಮ್. ಈಗಾಗಲೇ ಜನಪ್ರಿಯತೆಯಲ್ಲೂ ಭಾಗ್ಯಲಕ್ಷ್ಮಿ ಮುಂದಿರೋದು ವಿಶೇಷ.
