ಬೆಂಗಳೂರು: ನಗರದಲ್ಲಿನ ಟ್ರಾಫಿಕ್ ನಡುವೆಯು ಇಂದು ಆಂಬ್ಯುಲೆನ್ಸ್ ಮೂಲಕ ಜೀವಂತ ಹೃದಯವನ್ನು (Heart) ಯಶಸ್ವಿಯಾಗಿ ರವಾನೆ ಮಾಡಲಾಯಿತು.
ಕಿಮ್ಸ್ ಆಸ್ಪತ್ರೆಯಿಂದ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಜೀವಂತ ಹೃದಯವನ್ನು ಯಶಸ್ವಿ ಸಾಗಾಟ ಮಾಡಲಾಗಿದೆ. ಕೇವಲ 7 ನಿಮಿಷದಲ್ಲೇ 10 ಕಿ.ಮೀ ದೂರವನ್ನು ಸಂಚರಿಸಿ ಆಸ್ಪತ್ರೆಗೆ ಸಾಗಿಸಲಾಯಿತು.ಇದನ್ನೂ ಓದಿ:ಗರ್ಭಕಂಠ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ ನೀಡಿ – ಆರೋಗ್ಯ ಸಚಿವರಿಗೆ ಮಹಿಳಾ ಆಯೋಗ ಪತ್ರ
ಸೋಮವಾರ (ಡಿ.15) 6:30ರ ಸುಮಾರಿಗೆ ಹೊರಟು ಕೇವಲ 7 ನಿಮಿಷದಲ್ಲೇ ಆಂಬ್ಯುಲೆನ್ಸ್ ಆಸ್ಪತ್ರೆ ತಲುಪಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರ (Bengaluru Traffic Police) ಸಹಕಾರದೊಂದಿಗೆ ಯಶಸ್ವಿ ಸಾಗಾಟ ಮಾಡಲಾಯಿತು.

