ಚಿತ್ರದುರ್ಗದಲ್ಲಿ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಸೆರೆ

Public TV
1 Min Read

ಚಿತ್ರದುರ್ಗ: ಹಲವು ದಿನಗಳಿಂದ ಜನರ ನೆಮ್ಮದಿ ಕೆಡಿಸಿದ್ದ ಚಿರತೆ (Leopard) ಕೊನೆಗೂ ಬೋನಿಗೆ ಬಿದ್ದಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ತಿಂಗಳಿಂದ ಕಡ್ಲೆಗುದ್ದು, ಸಿದ್ದಾಪುರ, ಕುರುಬರ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಚಿರತೆ ಇಂದು ಬೋನಿಗೆ ಬಿದ್ದಿದೆ. ಈ ಚಿರತೆ ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಸಂಜೆಯಾದರೆ ಗ್ರಾಮಸ್ಥರು ಮನೆಯಿಂದ ಹೊರ ಬರಲು ಸಹ ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು. ಇದನ್ನೂ ಓದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್

ಹೀಗಾಗಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು. ಶನಿವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಅದನ್ನು ಸುರಕ್ಷಿತವಾಗಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ಚಿರತೆ ಕಾಟದಿಂದ ಭಯಭೀತರಾಗಿದ್ದ ಗ್ರಾಮಸ್ಥರು ನಿರಾಳರಾಗಿದ್ದಾರೆ. ಇದನ್ನೂ ಓದಿ: Mangaluru| ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ದುರ್ಮರಣ

Share This Article