ಬೆಂಗಳೂರು| ಕೋರ್ಟ್‌ ಆವರಣದಲ್ಲೇ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

Public TV
1 Min Read

ಬೆಂಗಳೂರು: ಕೋರ್ಟ್‌ ಆವರಣದಲ್ಲೇ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ ಗಡಿ ಹೊಸೂರಿನಲ್ಲಿ ನಡೆದಿದೆ.

ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನ ನಡೆದಿದೆ. ಕಣ್ಣನ್, ಕೋರ್ಟ್ ಆವರಣದಲ್ಲಿ ಹಲ್ಲೆಗೊಳಗಾದ ವಕೀಲ. ಆನಂದ್ ಎಂಬಾತ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಹೊಸೂರು ಒಂದೇ ಕಡೆ ಇದ್ದ ಜಾಗ. ಇಂತಹ ಸ್ಥಳದಲ್ಲೇ ವಕೀಲನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ವಕೀಲ ಕಣ್ಣನ್ ಮೇಲೆ ಹಲ್ಲೇ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಹಲ್ಲೆ ಖಂಡಿಸಿ ರಸ್ತೆಯಲ್ಲಿ ಕುಳಿತು ವಕೀಲರು ಪ್ರತಿಭಟನೆ ಮಾಡಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Share This Article