ಹಾಸನ: ಕಾಡಾನೆಗಳ (Wild Elephant) ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ಬೊಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಗ್ರಾಮದ ಬಿ.ಡಿ.ಮಲ್ಲೇಶ್ವರ, ನಿಂಗೇಗೌಡ ಹಾಗೂ ಇತರೆ ರೈತರಿಗೆ ಸೇರಿದ ತೆನೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳ ಹಿಂಡು ಸಂಪೂರ್ಣ ತಿಂದು ತುಳಿದು ನಾಶ ಮಾಡಿದೆ. ಅಲ್ಲದೇ ಭತ್ತ, ಬೈನೆ, ಬಾಳೆ, ಕಾಫಿ, ಅಡಿಕೆ ಬೆಳೆಗಳನ್ನೂ ಸಂಪೂರ್ಣ ನಾಶ ಮಾಡಿದೆ. ಇದನ್ನೂ ಓದಿ: ಬಡತನದಲ್ಲಿ ಜೀವನ ನಡೆಸುತ್ತಿದ್ದ ಕ್ಷೌರಿಕನ ಬಾಳಲ್ಲಿ `ಬೆಳಕು’ ನೀಡಿದ ಹೈಟೆಕ್ ಪಬ್ಲಿಕ್ ಸಲೂನ್
ಇಷ್ಟಾದರೂ ಅರಣ್ಯ ಇಲಾಖೆ ಸ್ಥಳಕ್ಕೆ ಬಾರದೇ ಕೈಚೆಲ್ಲಿ ಕುಳಿತಿದೆ ಎಂದು ರೈತರು ಆರೋಪಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಮಲೆನಾಡು ಭಾಗದ ಜನತೆ ಹೈರಾಣಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: KFCSC ವ್ಯವಸ್ಥಾಪಕ ಆತ್ಮಹತ್ಯೆ

 
			 
		 
		 
                                
                              
		