– ಗ್ರೇಟರ್ ಬೆಂಗ್ಳೂರು ರದ್ದು ಮಾಡ್ತೀವಿ ಎಂದ ಅಶೋಕ್ ವಿರುದ್ಧ ಡಿಕೆಶಿ ಗರಂ
ಬೆಂಗಳೂರು: ಬಿ ಖಾತಾಗಳಿಗೆ ಎ ಖಾತಾ (A Khata) ಮಾನ್ಯತೆ ಘೋಷಣೆ ಆಗಿ ತಿಂಗಳೇ ಕಳೆದ್ರೂ ಇನ್ನೂ ವಿತರಣೆ ಮಾಡಿಲ್ಲ. ಆ್ಯಪ್ ಅಭಿವೃದ್ಧಿ ಪಡಿಸುತ್ತಾ ಇದ್ದೇವೆ ಎಂಬ ಕಥೆ ಹೇಳ್ತಾ ಇದ್ರು. ಎ ಖಾತಾ ವಿತರಣೆ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿ ನಾಳೆ ಮತ್ತೊಂದು ಸುದ್ದಿಗೋಷ್ಠಿ ಮಾಡಿ ಎ ಖಾತಾ ಅಪ್ಡೇಟ್ ನೀಡೋದಾಗಿ ತಿಳಿಸಿದ್ದಾರೆ.
ಇನ್ನೂ ಓಸಿ, ಸಿಸಿ ವಿನಾಯ್ತಿ ಕುರಿತು ಪ್ರತಿಕ್ರಿಯಿಸಿ, 30×40 ನಿವೇಶನದಲ್ಲಿ ಮನೆ ನಿರ್ಮಿಸಿರುವವರಿಗೆ ವಿದ್ಯುತ್ ಸಂಪರ್ಕದ ಓಸಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಕ್ಯಾಬಿನೆಟ್ನಲ್ಲಿ (Cabinet) ನಿರ್ಣಯ ಕೂಡ ಆಗಿದೆ. 30×40 ಹೆಚ್ಚಿನ ನಿವೇಶನಗಳದ್ದು ಸಿಎಂ ನಿರ್ಣಯ ತಗೋಳ್ತಾರೆ. ಸುಪ್ರೀಂ ಕೋರ್ಟ್ ನಿರ್ದೇಶನ ಇರೋದ್ರಿಂದ ಒಂದಷ್ಟು ಕಾನೂನು ಸಲಹೆಗಳನ್ನ ತೆಗೆದುಕೊಳ್ಳೋದಕ್ಕೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಸಿಎಂ ಅವರೇ ನಿರ್ಣಯ ಮಾಡ್ತಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ
ಅಶೋಕ್ ವಿರುದ್ಧ ಡಿಸಿಎಂ ಗರಂ
ಇದೇ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ರದ್ದು ಮಾಡ್ತೆವೆ ಎಂಬ ಆರ್.ಅಶೋಕ್ (R Ashoka) ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಇದು ಮೊದಲ ಮೀಟಿಂಗ್, ಮೊದಲ ಮೀಟಿಂಗ್ ನಲ್ಲಿ ಅಜೆಂಡಾ ಕೊಡಲ್ಲ. ಅವರು ಹಿರಿಯರಾಗಿ ಬೆಂಗಳೂರು ನಗರಕ್ಕೆ ವಿರುದ್ಧ ಕೆಲಸ ಮಾಡ್ತಿದ್ದಾರೆ. ಇದು ಬಿಜೆಪಿಯವರು ಬೆಂಗಳೂರು ಜನರಿಗೆ ಮಾಡಿರೋ ಮೋಸ ಜನರು ಅವರಿಗೆ ಅವಕಾಶ ನೀಡಿದ್ರೂ ಅವರು ಬಂದಿಲ್ಲ. ಈ ವಿಚಾರದಲ್ಲಿ ಬಹಳ ವಿಷಾದ ಇದೆ. ಅವರಿಗೆ ರಾಜಕಾರಣವೇ ಹೆಚ್ಚಾಗಿದೆ ವಜಾ ಮಾಡೋದು ಅವರಿಗೆ ಬಿಟ್ಟಿದ್ದು. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಿರೋದು. ಬದಲಾವಣೆ ತಂದಿರೋದು ಇವತ್ತಿನ ತನಕ ಬಿಜೆಪಿ ಮಾಡೋಕೆ ಆಗಿಲ್ಲ. ಅವರು ಹೇಳ್ತಾರೆ ಅಂತಾ ತಲೆಕೆಡಿಸಿಕೊಳ್ಳಲ್ಲ. ಅವರು ಎಲೆಕ್ಷನ್ಗೆ ನಿಲ್ಲಲ್ಲ ಅಂತಾ ಹೇಳಲಿ ಎಂದು ಸವಾಲ್ ಎಸೆದರು. ಇದನ್ನೂ ಓದಿ: ದರ್ಶನ್ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ