ವರದಕ್ಷಿಣೆ ತರದ್ದಕ್ಕೆ ಗೃಹಿಣಿಯ ಕತ್ತು ಹಿಸುಕಿ ಕೊಲೆ

Public TV
1 Min Read

ಹುಬ್ಬಳ್ಳಿ: ತವರು ಮನೆಯಿಂದ ವರದಕ್ಷಿಣೆ ತರದ್ದಕ್ಕೆ ಗಂಡನ ಮನೆಯವರು ಗೃಹಿಣಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ (Hubballi) ವಿಶಾಲ ನಗರದಲ್ಲಿ ನಡೆದೆ.

ಹೀನಾ ಕೌಸರ(28) ವರದಕ್ಷಿಣೆ (Dowry) ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಎರಡೂ ವರ್ಷದ ಹಿಂದೆ ಮಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ಹೀನಾ ಮದುವೆಯಾಗಿತ್ತು. ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ನಂತರ ಮಹಮ್ಮದ್ ಕುಟುಂಬಸ್ಥರು ಹೀನಾಗೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಹಲವು ಬಾರಿ ಮಹಮ್ಮದ್ ಕುಟುಂಬಸ್ಥರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೂ ಹೀನಾಳಿಗೆ ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತು. ಇದನ್ನೂ ಓದಿ: ಮಾಜಿ ಸಿಎಂ ಲಾಲು ಪ್ರಸಾದ್, ಇಬ್ಬರು ಪುತ್ರರಿಗೆ ಜಾಮೀನು

ಭಾನುವಾರವೂ ವರದಕ್ಷಿಣೆ ತರುವಂತೆ ಹೀನಾಳೊಂದಿಗೆ ಮಹಮ್ಮದ್ ಕುಟುಂಬಸ್ಥರು ಜಗಳವಾಡಿದ್ದರು. ಗಂಡ ಮಹಮ್ಮದ್ ಅಜರುದ್ದೀನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದಿನಿ ಶಬ್ಬೋ ಸೇರಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಿ ಹೀನಾ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

Share This Article