13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ  ಆತ್ಮಹತ್ಯೆ

Public TV
2 Min Read

ಕಲಬುರಗಿ: 13 ವರ್ಷ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಮತ್ತೊಬ್ಬನ ಜೊತೆ ಮದುವೆಯಾದ ಕಾರಣಕ್ಕೆ ಡೆತ್ ನೋಟ್ ಬರೆದಿಟ್ಟು ಪ್ರಿಯಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಕಮಲಾಪುರ (Kamalapura) ತಾಲೂಕಿನ ಮಡಕಿ ಗ್ರಾಮದಲ್ಲಿ ನಡೆದಿದೆ.

ದೇವೇಂದ್ರಪ್ಪ ಕಲಕೇರಿ (32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಡಕಿ ಗ್ರಾಮದ ಯುವತಿಯೋರ್ವಳನ್ನು ದೇವೇಂದ್ರಪ್ಪ ಪ್ರೀತಿಸಿದ್ದ. ಕಳೆದ ನಾಲ್ಕು ವರ್ಷದ ಹಿಂದೆ ಬೇರೊಬ್ಬನೊಂದಿಗೆ ಯುವತಿ ಮದುವೆಯಾಗಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿಯಲ್ಲಿ ಚಿಕ್ಕಪ್ಪ ಹಾಗೂ ಗಂಡನ ಜೊತೆ ವಾಸವಾಗಿದ್ದಳು. ಆಗಾಗ ದೇವೇಂದ್ರನಿಗೆ ಫೋನ್ ಮಾಡಿ ತನ್ನನ್ನು ಮದುವೆ ಆಗದೆ ಹೋದರೆ ಜೀವ ಕಳೆದುಕೊಳ್ಳುವುದಾಗಿ ದುಂಬಾಲು ಬೀಳುತ್ತಿದ್ದಳು ಎಂದು ದೇವೇಂದ್ರಪ್ಪ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಜಾಮೀನು – ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ

ಹೀಗಾಗಿ, ಆತ ಬೆಂಗಳೂರಿಗೆ ತೆರಳಿ ಯುವತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋದಾಗ ಆಕೆ ಇದುವರೆಗೆ ತನ್ನ ಚಿಕ್ಕಪ್ಪ ಎಂದು ಪರಿಚಯಿಸಿದ್ದ ವ್ಯಕ್ತಿಯೊಂದಿಗೆ ಮಲಗಿರುವುದನ್ನು ನೋಡಿ ತಾನು ಆಘಾತಗೊಂಡಿದ್ದಾಗಿಯೂ, ನಂತರ ನಡೆದ ಮಾತಿನ ಚಕಮಕಿ ವೇಳೆ ಆ ವ್ಯಕ್ತಿಗೆ ಚಾಕು ಇರಿದ ಕಾರಣಕ್ಕಾಗಿ ತನ್ನ ಮೇಲೆ ಸ್ಥಳದಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದರಿಂದ ತಾನು ಅಲ್ಲಿಂದ ಓಡಿ ಬಂದಿದ್ದಾಗಿಯೂ ಪತ್ರದಲ್ಲಿ ದಾಖಲಿಸಿದ್ದಾನೆ. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು

ಈ ಮಧ್ಯೆ, ತನ್ನ ಪ್ರೇಯಸಿ ಹೀಗೆ ಅನ್ಯ ವ್ಯಕ್ತಿಯೊಂದಿಗೆ ಮಲಗಿರುವುದನ್ನು ಕಣ್ಣಾರೆ ಕಂಡ ಬಳಿಕ ತಾನು ಬೇರೊಂದು ಹುಡುಗಿಯನ್ನು ಮದುವೆಯಾಗುವುದಾಗಿ ಆಕೆಗೆ ತಿಳಿಸಿದ್ದಾಗಿಯೂ, ಇದಕ್ಕೆ ಸಹಮತಿ ವ್ಯಕ್ತಪಡಿಸದ ಆಕೆ ತಾನು ಪೊಲೀಸ್ ಕಂಪ್ಲೆಂಟ್ ನೀಡುವುದಾಗಿ ಬೆದರಿಕೆ ಹಾಕಿದ್ದಾಗಿಯೂ ಡೆತ್ ನೋಟ್ ನಲ್ಲಿ ದೇವೇಂದ್ರಪ್ಪ ಉಲ್ಲೇಖಿಸಿದ್ದಾನೆ.
ಚಾಕು ಇರಿತ ಕೇಸ್ ಸಂಬಂಧ ಕೊಡಿಗೇಹಳ್ಳಿ ಪೊಲೀಸರು ದೇವೇಂದ್ರಪ್ಪನನ್ನು ಹುಡುಕಿಕೊಂಡು ಹೋಗಿದ್ದರು. ಆರೋಪಿಯನ್ನು ಬಂಧಿಸಲು ಆಗಮಿಸುವ ಮುನ್ನವೇ ಆತ ನೇಣಿಗೆ ಶರಣಾಗಿದ್ದ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್
Share This Article