12 ಮದುವೆ, 6 ಮಕ್ಕಳು – ವಿಧವೆಯರು, ಡಿವೋರ್ಸ್‌ ಪಡೆದ ಮಹಿಳೆಯರನ್ನೇ ಟಾರ್ಗೆಟ್‌ ಮಾಡ್ತಿದ್ದ ವಂಚಕ

Public TV
1 Min Read

– ಹೆಣ್ಣು ನೋಡೋಕೆ ಬಾಡಿಗೆಗೆ ತಂದೆ, ತಾಯಿ, ಅಕ್ಕ, ಅಣ್ಣರನ್ನು ಬುಕ್ ಮಾಡ್ತಿದ್ದ ಖತರ್‌ನಾಕ್

ಮೈಸೂರು: ವಿಧವೆಯರು, ಡಿವೋರ್ಸ್‌ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬರೋಬರಿ 12 ಮದುವೆಯಾಗಿ 13 ನೇ ಮದುವೆಗೆ ಸಿದ್ಧವಾಗಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಖತರ್‌ನಾಕ್ ವಂಚಕನ ಇನ್ನಷ್ಟು ವಿಷಯಗಳು ಈಗ ಬಯಲಾಗುತ್ತಿವೆ.

ಬೆಂಗಳೂರು ಮೂಲದ 35 ವರ್ಷದ ಮಹೇಶ್ ಎಂಬ ಈ ಖತರ್‌ನಾಕ್ ವಂಚಕನನ್ನು ಮೈಸೂರು ಪೊಲೀಸರು ಮಂಗಳವಾರ ಬಂಧಿಸಿದ್ದರು. ವಿಚಾರಣೆ ವೇಳೆ ಇವನ ಇನ್ನಷ್ಟು ವಿಷಯಗಳು ಬಹಿರಂಗಗೊಂಡಿವೆ. ಮಹೇಶ್ ಓದಿರೋದು ಬರೀ 5 ನೇ ಕ್ಲಾಸ್. ಆದರೆ ಮಹಿಳೆಯರಿಗೆ ವಂಚಿಸುವಾಗ ನಾನು ಡಾಕ್ಟರ್, ಎಂಜಿನಿಯರ್ ಎಂದು ಪೋಸ್ ಕೊಟ್ಟಿದ್ದಾನೆ. ಇದನ್ನೂ ಓದಿ: ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ!

ಶಾದಿ ಡಾಟ್ ಕಾಂ ಮೂಲಕ ಮಹಿಳೆಯರ ಸಂಪರ್ಕ ಪಡೆದು ಅವರನ್ನು ಮದುವೆಯಾಗಿ, ಮಕ್ಕಳು ಮಾಡಿ, ನಗ-ನಾಣ್ಯ ದೋಚಿ ನಾಪತ್ತೆಯಾಗುತ್ತಿದ್ದ. ಆದರೆ ಮಾರ್ಯಾದೆಗೆ ಅಂಜಿ ಇವನ ವಿರುದ್ಧ ಕಂಪ್ಲೇಂಟ್ ಕೊಡಲು ಮಹಿಳೆಯರ ಹಿಂದೇಟು ಹಾಕಿದ್ದಾರೆ.

ಮಹಿಳೆಯರನ್ನು ಮದ್ವೆಯಾಗುವಾಗ ತಲಾ 5 ಸಾವಿರ ಕೊಟ್ಟು ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗವನ್ನು ಕರೆದುಕೊಂಡು ಹೋಗುತ್ತಿದ್ದ. ಒಂದೊಂದು ಮದುವೆಗೆ ಒಂದೊಂದು ಬಳಗ ಫಿಕ್ಸ್ ಮಾಡುತ್ತಿದ್ದ. ಒಟ್ಟು 12 ಮದುವೆ ಆಗಿದ್ದಾನೆ. ಈ ಪೈಕಿ 6 ಮಹಿಳೆಯರಿಗೆ ಮಕ್ಕಳನ್ನು ನೀಡಿದ್ದಾನೆ. ಇದನ್ನೂ ಓದಿ: ಆಟೋ ಚಾಲಕರ ನಿರ್ಲಕ್ಷ್ಯ ಆರೋಪ- ಬೇಡಿಕೆಗಳ ಈಡೇರಿಕೆಗೆ ಬಂದ್ ಎಚ್ಚರಿಕೆ ಕೊಟ್ಟ ಒಕ್ಕೂಟ

ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆಯನ್ನು ಛಾಳಿ ಮಾಡಿಕೊಂಡ ಇವನು ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಪಾದಿಸಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಶೋಕಿ ಮಾಡುತ್ತಿದ್ದ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್