ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

Public TV
1 Min Read

ನವದೆಹಲಿ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ತಮಿಳುನಾಡಿನ (TamilNadu) ಮಹಿಳೆಯೊಬ್ಬರು ದಲಿತ ಮೀಸಲಾತಿಯ (Reservation) ಲಾಭ ಪಡೆಯಲು ತನ್ನನ್ನು ತಾನು ಹಿಂದೂ ಧರ್ಮೀಯಳು ಎಂದು ಹೇಳಿಕೊಂಡಿದ್ದನ್ನು ಸುಪ್ರೀಂ ಕೋರ್ಟ್ (Supreme Court) ಬಲವಾಗಿ ಖಂಡಿಸಿದೆ.

ಮೀಸಲಾತಿ ಸೌಲಭ್ಯ ಪಡೆಯಲು ಮತಾಂತರ ಇಲ್ಲವೇ ಮರು ಮತಾಂತರ ಆಗುವುದು ಸಂವಿಧಾನಕ್ಕೆ ಮಾಡಿದ ವಂಚನೆ ಆಗುತ್ತದೆ. ಅದು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಆಶಯಕ್ಕೆ ಧಕ್ಕೆ ತಂದತೆ ಆಗುತ್ತದೆ. ಇದಕ್ಕೆ ಅನುಮತಿ ನೀಡಲಾಗದು ಎಂದು ನ್ಯಾ. ಪಂಕಜ್ ಮಿತ್ತಲ್, ಆರ್ ಮಹದೇವನ್ ಅವರಿದ್ದ ಪೀಠ ಸ್ಪಷ್ಟವಾಗಿ ತಿಳಿಸಿದೆ. ಇದನ್ನೂ ಓದಿ: ಜಮೀರ್‌ ಪ್ರಭಾವ ಬಳಸಿ ಚಿತ್ರದುರ್ಗದಲ್ಲಿ 6 ಎಕ್ರೆ ಖಬರ್‌ಸ್ಥಾನ ಜಮೀನು ಕಬಳಿಕೆ- ವಕ್ಫ್ ಮಾಜಿ ಅಧ್ಯಕ್ಷನ ವಿರುದ್ಧವೇ ಆಕ್ರೋಶ

 

ಸೆಲ್ವಮಣಿ ಎನ್ನುವವರು, ತಾನು ಹಿಂದೂ ಧರ್ಮದ ವಳ್ಳುವನ್ ಜಾತಿಗೆ ಸೇರಿದ್ದೇನೆ. ಎಸ್‌ಸಿ ಮೀಸಲಾತಿ ಅಡಿ ಗುಮಾಸ್ತ ಹುದ್ದೆ ನೀಡಿ ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ತಮಿಳುನಾಡು ಸರ್ಕಾರ, ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಈ ಪ್ರಕರಣ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

Share This Article