ಬೆಂಗಳೂರು | ನಿರ್ಮಾಣ ಹಂತದಲ್ಲಿದ್ದ ಮೂರಂತಸ್ತಿನ ಕಟ್ಟಡ ಧಗಧಗ

Public TV
1 Min Read

ಬೆಂಗಳೂರು: ಸಿಲಿಂಡರ್ ಸೋರಿಕೆಯಿಂದ ನಿರ್ಮಾಣ ಹಂತದ ಕಟ್ಟಡ ಬೆಂಕಿಗಾಹುತಿಯಾಗಿರುವ ಘಟನೆ ನಗರದ ಮಾಗಡಿ ರಸ್ತೆಯ (Magadi Road) ಸೀಗೆಹಳ್ಳಿಯ ಶಿವಾನಿ ಗ್ರೀನ್ಸ್ ಲೇಔಟ್‌ನಲ್ಲಿ ನಡೆದಿದೆ.

ಸತೀಶ್ ಎನ್ನುವವರಿಗೆ ಸೇರಿದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿದ್ದ ಬಿಲ್ಡಿಂಗ್‌ನಲ್ಲಿ ವುಡ್ ವರ್ಕ್ಸ್ ಮಾಡಲಾಗಿತ್ತು. ಈ ವೇಳೆ ಕೆಲಸಗಾರರ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಬಿದ್ದು, ಧಗಧಗನೆ ಹೊತ್ತಿ ಉರಿದ ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿದೆ.ಇದನ್ನೂ ಓದಿ: ಅಧಿಪತ್ರಕ್ಕಾಗಿ ಟಿಪಿಕಲ್ ಪತ್ರಕರ್ತರಾದ್ರು ಪ್ರಶಾಂತ್ ನಟನಾ!

ಕಟ್ಟಡದಲ್ಲಿ ಒಟ್ಟು ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ನೀರಿನ ಟ್ಯಾಂಕರ್ ಮೇಲೆ ಕುಳಿತಿದ್ದ ಓರ್ವನನ್ನು ರಕ್ಷಣೆ ಮಾಡಲಾಗಿದೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ಇನ್ನುಳಿದ ಇಬ್ಬರು ಕಾರ್ಮಿಕರು ಕಟ್ಟಡದೊಳಗೆ ಸಿಲುಕಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡೋ ನೈತಿಕತೆ, ಮಾನ ಮರ್ಯಾದೆ ಇಲ್ಲ – ಈಶ್ವರ್ ಖಂಡ್ರೆ

Share This Article