ರೈತರ ಮಕ್ಕಳಿಗೆ ಹೆಣ್ಣುಕೊಡ್ಸಿ; ಎಲ್ಲಾ ಸವಲತ್ತು ಕೊಡಿಸೋ ಸರ್ಕಾರ ಹೆಣ್ಣು ಕೊಡಿಸೋಕೆ ಆಗಲ್ವೆ? – ವೃದ್ಧನ ಅಳಲು

Public TV
1 Min Read

– ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಚಿಕ್ಕನಕೋಟೆ ರೈತ

ತುಮಕೂರು: ರೈತರ (Farmers) ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಮುಂದೆ ವೃದ್ಧರೊಬ್ಬರು ಅಳಲು ತೋಡಿಕೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ನಡೆದಿದೆ.

ಜಿಲ್ಲೆಯ ಶಿರಾದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ವೃದ್ಧರೊಬ್ಬರು ಜಿಲ್ಲಾಧಿಕಾರಿ (District Collector) ಶುಭಕಲ್ಯಾಣ್ ಅವರಿಗೆ ಮನವಿ ಮಾಡಿದ್ದಾರೆ. ಚಿಕ್ಕನಕೋಟೆ ಗ್ರಾಮದ ರೈತರಾದ ಜಯರಾಮಪ್ಪ ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಮೇಲುಕೋಟೆಯಲ್ಲಿ ಟಿಪ್ಪು ಬ್ರಾಹ್ಮಣರನ್ನು ಕತ್ತರಿಸಿದ್ದ ಇತಿಹಾಸವಿದೆ – ಅಶೋಕ್‌ ಕೆಂಡಾಮಂಡಲ

ರೈತರ ಮಕ್ಕಳಿಗೆ ಎಲ್ಲಿಯೂ ಹೆಣ್ಣು ಕೊಡಲ್ಲ ಅಂತಾರೆ. ಎಲ್ಲಿ ಹೋದ್ರೂ ಸರ್ಕಾರಿ ಕೆಲಸ ಇದ್ರೆನೇ ಹೆಣ್ಣು ಕೊಡೋದು ಅಂತಾರೆ. ನಮ್ಮಂಥವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಸವಲತ್ತು ಕೊಡಿಸೋ ಸರ್ಕಾರ ಹೆಣ್ಣು ಕೊಡಿಸೋಕೆ ಆಗಲ್ವೆ? ಎಂದೂ ಸಹ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

ರೈತರಾದ ಜಯರಾಮಪ್ಪ ಸುಮಾರು 8 ವರ್ಷಗಳಿಂದ ತಮ್ಮ ಕೃಷಿಕ ಮಗನಿಗಾಗಿ ಹೆಣ್ಣು ಹುಡುಕಿ ಸುಸ್ತಾಗಿದ್ದಾರೆ. ಕೊನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಶುಭಾಕಲ್ಯಾಣ್‌ ನೋಡೋಣ ಅನ್ನೋ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ

Share This Article