-ಎಲ್ಲವನ್ನು ಅಭಿಮಾನಿಯ ಕುಟುಂಬಸ್ಥರಿಗೆ ಹಿಂದಿರುಗಿಸಿದ ನಟ
ನನ್ನ ಅಭಿಮಾನಿಯೊಬ್ಬರು ತಾವು ಸಾಯುವ ಮುನ್ನ ತಮ್ಮ 72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ನನ್ನ ಹೆಸರಿಗೆ ವರ್ಗಾಯಿಸಿದ್ದರು ಎಂದು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚಿಗೆ ಕರ್ಲಿ ಟೇಲ್ಸ್ ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, 2006ರಲ್ಲಿ ನಡೆದ ಘಟನೆಯೊಂದರ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ನಿಶಾ ಪಾಟೀಲ್ ಎಂಬ ಅಭಿಮಾನಿಯೊಬ್ಬರು ಭಾಗಿಯಾಗಿದ್ದರು. ಅವರು ತಮ್ಮ ಮರಣಕ್ಕೂ ಮುನ್ನ ತಮ್ಮ 72 ಕೋಟಿ ಮೌಲ್ಯದ ಎಸ್ಟೇಟ್‌ನ್ನು ನನ್ನ ಹೆಸರಿಗೆ ಬರೆಯುವಂತೆ ಬ್ಯಾಂಕ್‌ಗೆ ಸೂಚಿಸಿದ್ದರು. ಬಳಿಕ ನಾನು ಆ ಸಂಪತ್ತನ್ನೆಲ್ಲಾ ಅವರ ಕುಟುಂಬಸ್ಥರಿಗೆ ಹಿಂದುಗಿಸಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
ಸದ್ಯ ಸಂಜಯ್ ದತ್ ಅವರು ತೆಲುಗು ಸಿನಿಮಾ ಅಖಂಡ-2ರಲ್ಲಿ ಕಾಣಿಸಿಕೊಳ್ಳಲಿದ್ದು, ಸೆಪ್ಟೆಂಬರ್ 25ರಂದು ತೆರೆಕಾಣಲಿದೆ. ಮುಂಬರುವ ದಿನಗಳಲ್ಲಿ ರಿಲೀಸ್ ಆಗಲಿರುವ ಕನ್ನಡದ ಬಹುನಿರೀಕ್ಷಿತ ಕೆಡಿ ಮತ್ತು ದಿ-ಡೆವಿಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಆರಂಭದಲ್ಲಿ ಭೂತ್ನಿ ಮತ್ತು ಹೌಸ್‌ಫುಲ್ 5 ಸಿನಿಮಾದಲ್ಲಿ ಮಿಂಚಿದ್ದರು.
1981ರಲ್ಲಿ ರಾಕಿ ಸಿನಿಮಾ ಮೂಲದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಬಳಿಕ ನಾಮ್, ಸಾಜನ್, ಖಲ್ ನಾಯಕ್, ವಾಸ್ತವ್ ಮತ್ತು ಮುನ್ನಾ ಭಾಯ್ ಎಂಬಿಬಿಎಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿಯಾದರು.ಇದನ್ನೂ ಓದಿ: `ಡಿ ಬಾಸ್’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್ ಪೇಜ್‌ನಲ್ಲಿ ಮನವಿ