ಕುದುರೆ ಕುಸಿದು ಬಿದ್ದು ಖ್ಯಾತ ಮಾಡೆಲ್ ನಿಧನ

Public TV
1 Min Read

ಮಗೆ ಕುದುರೆ (Horse) ಓಡಿಸುವುದು ಅಂದರೆ ತುಂಬಾ ಇಷ್ಟ. ಅವಕಾಶ ಸಿಕ್ಕಾಗೆಲ್ಲ ನಾನು ಕುದುರೆಯೊಂದಿಗೆ ವೇಳೆ ಕಳೆಯುತ್ತೇನೆ ಎಂದು ಸದಾ ಹೇಳುತ್ತಿದ್ದ ಆಸ್ಟ್ರೇಲಿಯಾದ (Australia) ಖ್ಯಾತ ಮಾಡಲ್ ಸಿಯನ್ನಾ ವಿಯರ್ (Sienna Weir), ಅದೇ ಕುದುರೆ ಸವಾರಿಯಲ್ಲಿ ನಡೆದ ಅವಘಡದಲ್ಲಿ ಪ್ರಾಣಬಿಟ್ಟಿದ್ದಾರೆ.

ಏಪ್ರಿಲ್ 2 ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ಹಾರ್ಸ್ ರೈಡ್ ನಲ್ಲಿ ಸಿಯನ್ನಾ ಪಾಲ್ಗೊಂಡಿದ್ದರು. ಕುದುರೆ ಸವಾರಿ ಮಾಡುವಾಗ ಕುದುರೆ ಕುಸಿದು ಬಿದ್ದಿದೆ. ಆ ಅವಘದಲ್ಲಿ ನೆಲಕ್ಕೆ ಬಿದ್ದ ಸಿಯನ್ನಾ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಒಂದು ತಿಂಗಳು ಕಳೆದರೂ ಸಿಯನ್ನಾ ವಿಯರ್ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳದೇ ಇರುವ ಕಾರಣಕ್ಕಾಗಿ ಕುಟುಂಬದ ಅನುಮತಿಯೊಂದಿಗೆ ಮೇ 4ರಂದು ಲೈಫ್ ಸಪೋರ್ಟ್ ತೆಗೆಯಲಾಗಿದೆ. ಈ ಮೂಲಕ ಸಿಯನ್ನಾ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

ಸಿಯನ್ನಾ ವಿಯರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೆ ಅಪಾರ ಅಭಿಮಾನಿಗಳು ದುಃಖಕ್ಕೆ ಜಾರಿದ್ದಾರೆ. ಅಗಲಿದ ಮಾಡಲ್ ಗೆ ಕಂಬನಿ ಮಿಡಿದಿದ್ದಾರೆ. ‘ನಮ್ಮ ಹೃದಯದಲ್ಲಿ ಸದಾ ನೀವು ಇರುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅವರ ಫೋಟೋ ಹಂಚಿಕೊಂಡಿದ್ದಾರೆ.

Share This Article