ಮನೆಮುಂದೆಯೇ ಶವವಾಗಿ ಪತ್ತೆಯಾದ ಖ್ಯಾತ ಕೊರಿಯನ್ ನಟಿ

Public TV
1 Min Read

ಕೊರಿಯನ್ (Korean) ನ ಖ್ಯಾತ ನಟಿ ಜುಂಗ್ ಚೆಹ್ ಯುಲ್ (Jung Chae Yul) ನಿಗೂಢ ರೀತಿಯಲ್ಲಿ ನಿಧನರಾಗಿದ್ದಾರೆ. 26ರ ವಯಸ್ಸಿನ ಈ ನಟಿ ಅನುಮಾನಾಸ್ಪದವಾಗಿ (suspicious) ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಡೀಪ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಜುಂಗ್ ಚೆಹ್ ಯುಲ್ ಪ್ರತಿಭಾವಂತ ನಟಿಯಾಗಿದ್ದರು.

ಸೋಮವಾರ ಅವರ ಮನೆಯ ಬಳಿಯೇ ನಟಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸಾವಿನ ಸುತ್ತ ತನಿಖೆ ಆರಂಭಿಸಿದ್ದಾರೆ. ಈ ಸಾವನ್ನು ಹಲವಾರು ರೀತಿಯಲ್ಲಿ  ವಿಶ್ಲೇಷಿಸಲಾಗುತ್ತಿದೆ. ಕುಟುಂಬಸ್ಥರು ಕೂಡ ಸೂಕ್ತ ತನಿಖೆಗಾಗಿ ಒತ್ತಾಯಿಸಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:‘ಅನ್ಲಾಕ್ ರಾಘವ’ನಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ ರೇಚಲ್ ಡೇವಿಡ್

ಸೋಷಿಯಲ್ ಮೀಡಿಯಾದಲ್ಲಿ ಈ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದ್ದು, ಪೊಲೀಸರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಾವಿನ ರಹಸ್ಯ ಬಹಿರಂಗವಾಗುವ ತನಕ ವದಂತಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ನಟಿಯ ಅಂತಿಮ ಸಂಸ್ಕಾರ ಕೂಡ ಆಗಿದ್ದು, ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ನಟಿಯ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Share This Article