ಒಂದು ಕುಟುಂಬ ತಮ್ಮ ಶತ್ರುಗಳನ್ನ ನಾಶ ಮಾಡೋಕೆ ತಂತ್ರ, ಕುತಂತ್ರ, ಮಂತ್ರ ಮಾಡಿಕೊಂಡು ಬರ್ತಿದೆ: ಡಿಕೆ ಸುರೇಶ್

Public TV
1 Min Read

ಬೆಂಗಳೂರು: ತಮ್ಮ ರಾಜಕೀಯ ವಿರೋಧಿಗಳು ಬೆಳೆಯಬಾರದು ಅಂತಾ ಒಂದು ಕುಟುಂಬ ಮಂತ್ರ, ತಂತ್ರ ಎಲ್ಲಾ ಮಾಡಿಕೊಂಡು ಬರ್ತಿದೆ ಎಂದು ಪರೋಕ್ಷವಾಗಿ ದೇವೇಗೌಡರ (H.D.Deve Gowda) ಕುಟುಂಬದ ವಿರುದ್ದ ಸಂಸದ ಡಿ.ಕೆ.ಸುರೇಶ್ (D.K.Suresh) ಆರೋಪಿಸಿದರು‌.

ನನ್ನ ಮತ್ತು ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಮಾಡ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲಿಂದಲೂ ರಾಜಕೀಯ ಕುಟುಂಬ, ಒಂದು ಪಕ್ಷ ಇಂತಹದ್ದಕ್ಕೆ ಹೆಸರುವಾಸಿ. ಯಾರು ಅಂತಾ ನನಗೆ ಗೊತ್ತಿಲ್ಲ. ಒಂದು ಕುಟುಂಬ ಯಾವಾಗಲೂ ಇಂತಹ ಮಂತ್ರ, ತಂತ್ರ, ಕುತಂತ್ರ ಮಾಡಿಕೊಂಡು ಬಂದಿದೆ. ಅದನ್ನ ಮುಂದುವರೆಸಿಕೊಂಡು ಬಂದಿರಬಹುದು ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ಧ ಆರೋಪ ಮಾಡಿದರು. ಇದನ್ನೂ ಓದಿ: ಸರ್ಕಾರ ನಾಶ ಮಾಡೋದಕ್ಕೆ ನನ್ನ, ಸಿಎಂ ಮೇಲೆ ಶತ್ರು ಭೈರವಿ ಯಾಗ ಮಾಡಿಸ್ತಿದ್ದಾರೆ: ಡಿಕೆಶಿ ಬಾಂಬ್

ಕೆಲವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರೆ ಅವರಿಗೆ ಯಾರು ಇಲ್ಲ. ಡಿಸಿಎಂ ಹೆಸರು ಹೇಳಿದ್ರೆ ಪಕ್ಷ ಸಂಘಟನೆ ಮಾಡಬಹುದು. ಕಾರ್ಯಕರ್ತರನ್ನ ಎತ್ತಿಕಟ್ಟಲು ಡಿ.ಕೆ.ಶಿವಕುಮಾರ್ ಹೆಸರು ಬಳಸ್ತಾರೆ. ನಾನು ಇದರ ಬಗ್ಗೆ ಜಾಸ್ತಿ ಮಾತಾಡೊಲ್ಲ. ದೇಶದ ಬೆಳವಣಿಗೆ ಜನ ಗಮನಿಸುತ್ತಿದ್ದಾರೆ. ಕರ್ನಾಟಕದ ಪೆನ್‌ಡ್ರೈವ್ ಪ್ರಕರಣ ವಿಶ್ವದ ಗಮನ ಸೆಳೆದಿದೆ. ಅದನ್ನ ಸಮರ್ಥನೆ ಮಾಡಿ ರಾಜಕಾರಣ ಮಾಡ್ತಿದ್ದಾರೆ. ಯಾವ ಮಟ್ಟದ ವ್ಯವಸ್ಥೆ ರೂಪಿಸಲು ಆ ಪಕ್ಷ ಹೋಗಿದೆ ಅಂದರೆ ಅರ್ಥ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಬೇರೆಯವರು ಯಾರೂ ಚೆನ್ನಾಗಿ ಇರಬಾರದು ಅಂತಾ ಆ ಕುಟುಂಬ ಮಾಡಿಕೊಂಡು ಬಂದಿದೆ. ಆ ಕುಟುಂಬ ಅವತ್ತಿಂದ ಅದನ್ನೇ ಮಾಡಿಕೊಂಡು ಬಂದಿದೆ. ಅದರಿಂದ ಫಲ ಸಿಗುತ್ತಾ ನನಗೆ ಗೊತ್ತಿಲ್ಲ. ಅವರು ಯಾಕೆ ಹೀಗೆ ಮಾಡ್ತಾರೆ ಗೊತ್ತಿಲ್ಲ. ಕುಮಾರಸ್ವಾಮಿ, ರೇವಣ್ಣ, ದೇವೇಗೌಡ ಏನ್ ಮಾಡ್ತಾರೋ ಗೊತ್ತಿಲ್ಲ. ಅವರು ಎಲ್ಲಿ ಏನ್ ಮಾಡ್ತಾರೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ?

Share This Article