ಬಳ್ಳಾರಿ: ನೇಪಾಳದ ಪೋಕ್ರಾದಲ್ಲಿ(Pokhara) ವಿಜಯನಗರ ಜಿಲ್ಲೆಯ ಹೊಸಪೇಟೆಯ ಗಿರೀಶ್ ಅವರ ಕುಟುಂಬ ಸಿಲುಕಿಕೊಂಡಿದೆ.
ಹೊಸಪೇಟೆಯಿಂದ (Hosapete) ಸೆ.6 ರಂದು ನೇಪಾಳಕ್ಕೆ (Nepal) ಪ್ರಯಾಣ ಬೆಳೆಸಿದ್ದ ಕುಟುಂಬ ಪೋಕ್ರಾದ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಕನ್ನಡಿಗರು ಇದ್ದ ಹೋಟೆಲಿನ ಸಮೀಪದಲ್ಲೇ ಇದ್ದ ಮತ್ತೊಂದು ಹೊಟೇಲ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಗಿರೀಶ್ ಕುಟುಂಬ ಆತಂಕದಲ್ಲಿದೆ. ಇದನ್ನೂ ಓದಿ: ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ
ಮೊಬೈಲ್ ನೆಟ್ವರ್ಕ್ ಇಲ್ಲದೇ ಹೋಟೆಲಿನಿಂದ ಹೊರ ಹೋಗಲಾಗದೇ ಆತಂಕದಲ್ಲಿದ್ದಾರೆ. ಸೆ.9 ರರಂದು ಪೋಕ್ರಾದಿಂದ ಕಠ್ಮಂಡುಗೆ ಹೋಗಲು ಗಿರೀಶ್ ಕುಟುಂಬ ಪ್ಲಾನ್ ಮಾಡಿತ್ತು.
ಗಿರೀಶ್ ಜಿಂದಾಲ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ನೇಪಾಳದಲ್ಲಿ ರಸ್ತೆಗಳು ಕ್ಲಿಯರ್ ಆಗಿರುವ ಮಾಹಿತಿ ಇದ್ದು, ಸೈನಿಕರ ಸಹಾಯದಿಂದ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ಗಿರೀಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ