ಕಲಬುರಗಿ| ಸಾವಿನಲ್ಲೂ ಒಂದಾದ ಸಹೋದರರು; ಅಣ್ಣನ ಅಂತ್ಯಕ್ರಿಯೆ ಮುಗಿದ ಮರುದಿನವೇ ತಮ್ಮ ಸಾವು

1 Min Read

ಕಲಬುರಗಿ: ಅಣ್ಣನ ಸಾವಿನ ನೋವಿನಲ್ಲಿದ್ದ ತಮ್ಮ ಕೂಡ ಸಾವಿಗೀಡಾಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ. ಆ ಮೂಲಕ ಸಹೋದರರಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.

ಜನವರಿ 26ರಂದು ಬಸವಂತರಾಯ ಸಣ್ಣಕ್ (81) ಮೃತಪಟ್ಟಿದ್ದರು. ಅಣ್ಣನ ಅಂತ್ಯಕ್ರಿಯೆ ಮುಗಿದ ಮರುದಿನವೇ ತಮ್ಮ ತಮ್ಮನಾದ ಶಿವರಾಯ್ ಸಣ್ಣಕ್ (79) ಕೊಲೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಅಜಿತ್‌ ಪವಾರ್‌ ದುರ್ಮರಣ – ಕೊನೆಯ 26 ನಿಮಿಷದಲ್ಲಿ ಏನಾಯ್ತು?

ಅಣ್ಣನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಮನೆಗೆ ಬಂದು ಶಿವರಾಯ್ ಹಾಸಿಗೆ ಹಿಡಿದಿದ್ದರು. ಸಹೋದರನ ಅಗಲಿಕೆಯಿಂದ ಆಘಾತಕ್ಕೆ ಒಳಗಾಗಿದ್ದರು. ಆ ನೋವಿನಲ್ಲೇ ತಮ್ಮನೂ ಇಹಲೋಕ ತ್ಯಜಿಸಿದ್ದಾರೆ.

ಬಡದಾಳ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸಹೋದರರ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಅಣ್ಣ-ತಮ್ಮರ ಬಾಂಧವ್ಯವನ್ನು ನೆನೆದು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾತ್ರೆಗೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ – ಯುವ ಉದ್ಯಮಿಯ ದುರಂತ ಅಂತ್ಯ

Share This Article