ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ವೈದ್ಯ ಸಾವು

Public TV
1 Min Read

ರಾಯಚೂರು: ಹಠಾತ್ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ತವ್ಯದಲ್ಲಿದ್ದ ಯುವ ವೈದ್ಯ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಘಟನೆ ರಾಯಚೂರು (Raichuru) ಜಿಲ್ಲೆಯ ಸಿಂಧನೂರು ನಗರದ ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ನಡೆದಿದೆ. 34 ವರ್ಷದ ಜನರಲ್ ಸರ್ಜನ್ ಡಾ. ಚಂದ್ರಶೇಖರ ಮಾದಿನೂರು ಸಾವನ್ನಪ್ಪಿರುವ ವೈದ್ಯ. ಇದನ್ನೂ ಓದಿ: ಇಂದು, ನಾಳೆ ಅಬ್ಬರಿಸಲಿದೆ ಹಿಂಗಾರು ಮಳೆ – ರಾಜ್ಯದ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಎಂದಿನಂತೆ ರೋಗಿಗಳನ್ನ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದರು. ಸ್ವಲ್ಪ ಒತ್ತಡ ಎನ್ನಿಸಿದ್ದರಿಂದ ವಿಶ್ರಾಂತಿ ಪಡೆಯಲು ಮನೆಗೆ ತೆರಳಲು ಮುಂದಾದಾಗ ಮೆಟ್ಟಿಲು ಹತ್ತುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಆಸ್ಪತ್ರೆ ಮೇಲ್ಮಹಡಿಯಲ್ಲೇ ಮನೆಯಿದ್ದಿದುದರಿಂದ ಮೆಟ್ಟಿಲು ಹತ್ತಿ ಹೋಗುವಾಗ ಎದೆನೋವು ಕಾಣಿಸಿಕೊಂಡಿದೆ. ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಠಾತ್ ಹೃದಯಾಘಾತದಿಂದ ಸಾವು ಸಂಭವಿಸಿದ್ದು ಇಡೀ ಆಸ್ಪತ್ರೆಯಲ್ಲಿ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ಕೆಇಎ ಪರೀಕ್ಷೆ ಅಕ್ರಮ ಪ್ರಕರಣ – ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಕಾಂಪೌಂಡ್ ಹಾರಿ ಎಸ್ಕೇಪ್

Share This Article