ಮದುವೆಗೆ ಒಂದು ದಿನ ಬಾಕಿಯಿರುವಾಗಲೇ ಕುಸಿದು ಬಿದ್ದ ವರ, ಹೃದಯಾಘಾತದಿಂದ ಸಾವು

Public TV
1 Min Read

ಚಿಕ್ಕೋಡಿ: ಮದುವೆಗೆ ಒಂದು ದಿನ ಬಾಕಿಯಿರುವಾಗಲೇ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದಲ್ಲಿ ನಡೆದಿದೆ.

ಜುಂಜರವಾಡ ಆರ್‌ಸಿ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ (31) ಹೋಸಲ್ಕಾರ ಮೃತ ವ್ಯಕ್ತಿ.ಇದನ್ನೂ ಓದಿ: ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

ಸಂಬAಧಿಕರು ಹಾಗೂ ಕುಟುಂಬಸ್ಥರು ಸೆಪ್ಟೆಂಬರ್ 5ರಂದು ಮದುವೆಗೆ ದಿನಾಂಕ ನಿಗದಿಪಡಿಸಿದ್ದರು. ಮಂಗಳವಾರ ರಾತ್ರಿ ಎಂಟು ಗಂಟೆ ಆಸುಪಾಸಿನಲ್ಲಿ ಮನೆ ಮುಂದೆ ಮದುವೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಾಳೆ ನಡೆಯಲಿದ್ದ ಮದುವೆ ಸಿದ್ಧತೆಗಾಗಿ ದೂರವಾಣಿಯಲ್ಲಿ ಮಾತನಾಡುವ ವೇಳೆ ಈ ಅವಘಡ ಸಂಭವಿಸಿದ್ದು, ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ತಕ್ಷಣವೇ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದರೂ ಬದುಕುಳಿಯಲಿಲ್ಲ.

ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: 19ನೇ ವಯಸ್ಸಿಗೆ ಬ್ರೆಜಿಲಿಯನ್ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

Share This Article