ರಾಯಚೂರು: ವರ್ಷದ ಕೊನೆ ಹಾಗೂ ರಜಾ ದಿನ ಹಿನ್ನೆಲೆ ಮಂತ್ರಾಲಯ (Mantralaya) ರಾಘವೇಂದ್ರ ಸ್ವಾಮಿ ಮಠ ಹಿಂದೆಂದಿಗಿಂತಲೂ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಕ್ರಿಸ್‌ಮಸ್ ರಜೆ ಹಾಗೂ ಗುರುರಾಯರ ವಾರ ಇರುವುದರಿಂದ ಮಂತ್ರಾಲಯದಲ್ಲಿ ಜನಸಾಗರವೇ ಹರಿದುಬಂದಿದೆ.
ಸಾಮಾನ್ಯವಾಗಿ ರಜಾ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ, ಆದರೆ ಈಗ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಒಂದೇ ದಿನ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡಿದ್ದರಿಂದ ಭಕ್ತರಿಗೆ ಸೌಲಭ್ಯ ಒದಗಿಸಲು ಶ್ರೀಮಠ ಹರಸಾಹಸಪಡುತ್ತಿದೆ. ಬೃಂದಾವನ ದರ್ಶನಕ್ಕೆ ಅವಕಾಶವಿರುವ ಎಲ್ಲ ಬಾಗಿಲುಗಳನ್ನೂ ತೆರೆದು ಮಠದ ಆಡಳಿತ ಮಂಡಳಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.ಇದನ್ನೂ ಓದಿ: ಬೆಂಗಳೂರಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು
ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆ ರಾಯರ ದರ್ಶನಕ್ಕೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಯಿತು. ಈಗಾಗಲೇ ಶ್ರೀಮಠದ ರೂಂಗಳು ಭರ್ತಿಯಾಗಿದ್ದು, ಡಿ.23ರಿಂದ 2026ರ ಜ.15ರವರೆಗೆ ಯಾವುದೇ ರೂಮ್‌ಗಳು ಲಭ್ಯವಿರುವುದಿಲ್ಲವೆಂದು ಮಠದ ಆಡಳಿತ ಮಂಡಳಿ ತಿಳಿಸಿದೆ. ರೂಂ ಬುಕ್ ಮಾಡದೇ ನೇರವಾಗಿ ಬೆಂಗಳೂರು ಸೇರಿ ವಿವಿಧ ನಗರಗಳಿಂದ ಬಂದ ನೂರಾರು ಭಕ್ತರು ವಸತಿ ಸಮಸ್ಯೆ ಅನುಭವಿಸಬೇಕಾಯಿತು.

