ಪುನೀತ್ ಭಾವಚಿತ್ರದ ಎದುರೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

Public TV
1 Min Read

ಚಿಕ್ಕೋಡಿ: ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭಾವಚಿತ್ರದ ಮುಂದೆಯೇ  ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಾಮಾನ್ಯವಾಗಿ ಮದುವೆ ಮಂಟಪದಲ್ಲಿ ತಳಿರು, ತೋರಣ ಸೇರಿದಂತೆ ಅಲಂಕಾರಿಕ ವಸ್ತುಗಳಿಂದ ಮಂಟಪವನ್ನು ಅಲಂಕಾರಗೊಳಿಸಿರುತ್ತಾರೆ. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ಜೋಡಿಯೊಂದು ದಿವಂಗತ ನಟ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನವನ್ನು ವ್ಯಕ್ತ ಪಡಿಸುವುದರ ಜೊತೆಗೆ ಪುನೀತ್ ಭಾವಚಿತ್ರದ ಎದುರೇ ಮದುವೆಯಾಗಿದ್ದಾರೆ.

ಪುನೀತ್ ರಾಜ್‍ಕುಮಾರ್ ನಿಧನರಾಗಿ ಎರಡು ತಿಂಗಳಾದರೂ ಅವರ ನೆನಪು ಮಾತ್ರ ಗಡಿ ಜಿಲ್ಲೆಯ ಜನರಲ್ಲಿ ಅಚ್ಚಳಿಯಾಗಿ ಉಳಿದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಮಹಾಂತೇಶ ಹಾಗೂ ಸಾನ್ವಿ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಜೊತೆಗೆ ಪುನೀತ್ ಭಾವಚಿತ್ರ ಎದುರೇ ಅಕ್ಷತೆ ಹಾಕಿಸಿಕೊಂಡಿದ್ದಾರೆ. ಇದನ್ನೂ ಓದಿ: ನೋಡು ಗುರು ಟಿಕೆಟ್ ಕೊಡ್ತೀನಿ, ಗೆದ್ದು ಬಂದು ಮಿನಿಸ್ಟರ್ ಆಗು ಎಂದಿದ್ದರು ಡಿಕೆಶಿ: ಆಂಜನಮೂರ್ತಿ

ಮದುವೆ ಸಮಾರಂಭಕ್ಕೆ ಆಗಮಿಸಿದ ಜನರು ನವ ಜೋಡಿಗೆ ಹಾರೈಸುವುದ ಜೊತೆಗೆ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಲ್ಲದೇ ಪುನೀತ್ ಅಭಿಮಾನಿಗಳು ಜೋಡಿಗೆ ಅಪ್ಪು ಭಾವಚಿತ್ರ ಗಿಫ್ಟ್ ನೀಡಿ ಹಾರೈಸಿದರು. ಇದೇ ವೇಳೆ ಪುನೀತ್ ಅಗಲಿಕೆ ಎಂದು ಮರೆಯಲಾಗುತ್ತಿಲ್ಲ. ಅವರು ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

ಒಟ್ಟಾರೆ ಪುನೀತ್ ನಿಧನರಾಗಿ ಎರಡು ತಿಂಗಳಾದರೂ ಜನರಿಗೆ ಅವರ ಮೇಲಿರುವ ಪ್ರೀತಿ ಮತ್ತು ಅಭಿಮಾನ ಸ್ವಲ್ಪವು ಕಡಿಮೆಯಾಗುತ್ತಿಲ್ಲ. ಪುನೀತ್ ಇನ್ನೂ ಅಭಿಮಾನಿಗಳ ಹೃದಯದಲ್ಲಿಯೇ ನೆಲೆಸಿದ್ದು, ಅಪ್ಪು ಅವರನ್ನು ಜನ ದೇವರಂತೆ ಕಾಣುತ್ತಿರುವುದಕ್ಕೆ ಈ ನವ ಜೋಡಿಯ ಮದುವೆಯೇ ಸಾಕ್ಷಿ ಎನ್ನಬಹುದು.

Share This Article
Leave a Comment

Leave a Reply

Your email address will not be published. Required fields are marked *