ಬೆಳಗಾವಿಯಲ್ಲಿ 25 ಲಕ್ಷ ರೂ. ಮೌಲ್ಯದ 1800 ಕುಕ್ಕರ್ ಜಪ್ತಿ

Public TV
1 Min Read

ಬೆಳಗಾವಿ: ಬೈಲಹೊಂಗಲ ತಾಲೂಕಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಪ್ರಮಾಣದ ಕುಕ್ಕರ್ (Cooker) ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ 25 ಲಕ್ಷ ರೂಪಾಯಿ ಮೌಲ್ಯದ 1800 ಕುಕ್ಕರ್ ಗಳನ್ನು ಬೈಲಹೊಂಗಲ ಪೊಲೀಸರು ಜಪ್ತಿ ಮಾಡಿದ್ದಾರೆ. ತಲಾ ಒಂದು ಕುಕ್ಕರ್ ಬೆಲೆ ಅಂದಾಜು 1400 ರೂಪಾಯಿ ಇದ್ದು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು. ಇದನ್ನೂ ಓದಿ: ಸಾಮಾನ್ಯ ನಾಗರಿಕನಂತೆ BMTC ಬಸ್‍ನಲ್ಲಿ ರಾಹುಲ್ ಗಾಂಧಿ ಸಂಚಾರ

ಇತ್ತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 25 ಲಕ್ಷ ಮೌಲ್ಯದ ಕುಕ್ಕರ್ ವಶಕ್ಕೆ ಪಡೆಯಲಾಗಿದ್ದು, ಕುಕ್ಕರ್ ಡಬ್ಬಿ ಮೇಲೆ ಯಾವುದೇ ಪಕ್ಷದ ಚಿನ್ಹೆ, ಅಭ್ಯರ್ಥಿ ಹೆಸರು, ಫೋಟೋ ಇಲ್ಲ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article