ಮೈಸೂರಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್‌!

1 Min Read

ಮಡಿಕೇರಿ: ಸಾಮಾನ್ಯವಾಗಿ ಯಾವುದೇ ಬಸ್‌ಗಳಲ್ಲಿ (Bus) ವಯಸ್ಕರಿಗೆ ಪೂರ್ಣ ದರದ ಟಿಕೆಟ್‌, ವೃದ್ಧರಿಗೆ ಹಿರಿಯ ನಾಗರಿಕರ ಪಾಸ್‌ ಆಧರಿಸಿ ಹಾಗೂ ರಾಜ್ಯದ ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಲಾಗುತ್ತದೆ. ಮಕ್ಕಳಿಗೆ ಇದರಲ್ಲಿ ಶುಲ್ಕ ಕಡಿಮೆ ಇರುತ್ತದೆ. ಆದ್ರೆ ಮೈಸೂರಿನಿಂದ ಮಡಿಕೇರಿಗೆ ಹೊರಟ ಬಸ್‌ನಲ್ಲಿ ಬೆಕ್ಕಿನ ಮರಿಗೂ ಶೇ.50 ರಷ್ಟು ಟಿಕೆಟ್‌ ಶುಲ್ಕ (Ticket Price) ತೆಗೆದುಕೊಂಡ ಘಟನೆ ನಡೆದಿದೆ.

ಹೌದು. ಮೈಸೂರು-ಮಡಿಕೇರಿ ಮಾರ್ಗದ ಕೆಎಸ್‌ಆರ್‌ಸಿ ಬಸ್‌ನಲ್ಲಿ (KSRTC Bus) ಕಂಡಕ್ಟರ್ ಬೆಕ್ಕಿನ ಮರಿಗೆ ಸೀಟ್‌ ರಹಿತ ಶೇ.50 ಬಸ್‌ ಟಿಕೆಟ್‌ ಶುಲ್ಕ ತೆಗೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಈ ಟಿಕೇಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಮಾದಕ ವಸ್ತು ಸೀಜ್ – ಪರಮೇಶ್ವರ್ ರಾಜೀನಾಮೆಗೆ JDS ಆಗ್ರಹ

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಐಡಿ ಕಾರ್ಡ್‌ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೀಗ ಮೈಸೂರು – ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಕ್ಕಿನ ಮರಿಗೂ ಟಿಕೆಟ್‌ ಕೊಡಲಾಗಿದೆ. ಟಿಕೆಟ್‌ ತೆಗೆದುಕೊಂಡರೂ ಸಹ ಆ ಬೆಕ್ಕಿನ ಮರಿಗೆ ಸೀಟ್‌ ನೀಡಿಲ್ಲ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಮನೆ ಬಿಟ್ಟು ಹೋಗ್ತಿನಿ ತವರಿಂದ ಕೊಟ್ಟ ಗಿಫ್ಟ್ ವಾಪಸ್‌ ಕೊಡಿ ಎಂದಿದ್ದಕ್ಕೆ ಪತ್ನಿಯನ್ನು ಥಳಿಸಿ ಕೊಂದ ಪತಿ

Share This Article