ಬೆಂಗಳೂರು| ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು

1 Min Read

– ಚಲಿಸುತ್ತಿದ್ದ ಕಾರಿಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲು

ಬೆಂಗಳೂರು: ಚಲಿಸುತ್ತಿದ್ದ ಕಾರು ನಡುರಸ್ತೆಯಲ್ಲೇ ಹೊತ್ತು ಉರಿದು ಕರಕಲಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ನಡುರಸ್ತೆಯಲ್ಲೇ ಬೆಳಗ್ಗೆ 7:30 ರ ಸುಮಾರಿಗೆ ವರ್ಣ ಕಾರು ಧಗಧಗನೆ ಬೆಂಕಿಗೆ ಆಹುತಿಯಾಗಿದೆ. ಯಶವಂತಪುರದಿಂದ ಟಾಟಾ ಇನ್ಸ್ಟಿಟ್ಯೂಟ್ ಕಡೆಗೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ.‌ ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನೋಯ್ಡಾದಲ್ಲಿ ದಟ್ಟ ಮಂಜಿನಿಂದ ಕಂದಕಕ್ಕೆ ಉರುಳಿದ ಕಾರು – ಟೆಕ್ಕಿ ಸಾವು

ಬೆಂಕಿಗಾಹುತಿಯಾದ ವೈಟ್ ಬೋರ್ಡ್ ವರ್ಣ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರನ್ನು ಸ್ಟಾರ್ಟ್ ಮಾಡಿ ಕೇವಲ ಒಂದು ಕಿಮೀ ದೂರ ಕ್ರಮಿಸಲಾಗಿತ್ತು. ಕಾರಿನ‌ ಇಂಜಿನ್ ಭಾಗದಲ್ಲಿ ಬೆಂಕಿ, ಹೊಗೆ ಕಾಣಿಸೊಕೊಂಡಿದೆ.‌ ಕೂಡಲೇ ಕಾರಿನಲ್ಲಿದ್ದವರು ಇಳಿದು ಬಚಾವ್ ಆಗಿದ್ದಾರೆ.

ಬೆಂಕಿಯನ್ನ ನಂದಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಅಗ್ನಿಶಾಮಕದಳ ಸ್ಥಳಕ್ಕೆ ಬರುವ ಹೊತ್ತಿಗೆ ಬೆಂಕಿ ‌ಸಂಪೂರ್ಣ ಕಾರನ್ನು ಆವರಿಸಿತ್ತು.‌ ಕೇವಲ 5 ನಿಮಿಷದಲ್ಲಿ ಸಂಪೂರ್ಣ ಕಾರು ಹೊತ್ತಿ ಉರಿದಿದೆ. ಕಾರು ಬೆಂಕಿಗೆ ಆಹುತಿಯಾಗಲು ಬ್ಯಾಟ್ರಿ ಶಾರ್ಟ್ ಸರ್ಕ್ಯೂಟ್ ಅಥವಾ ಇಂಜಿನ್ ಸಮಸ್ಯೆ ಕಾರಣ ಇರಬಹುದು ಎನ್ನಲಾಗಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ – ಕೇಸ್‌ ದಾಖಲು

ಬೆಂಕಿಗೆ ಕಾರು ಆಹುತಿಯಾಗಲು ಕಾರಣವೇನು ಅಂತ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಯಶವಂತಪುರ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article