ತುಮಕೂರು: ಆರತಕ್ಷತೆಯಲ್ಲಿದ್ದ ವಧು ಮುಹೂರ್ತದ ಸಮಯದಲ್ಲಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ದೇವಸ್ಥಾನದಲ್ಲಿ ನಡೆದಿದೆ.
ಕಾವ್ಯ(ಹೆಸರು ಬದಲಾಯಿಸಲಾಗಿದೆ) ಮದುವೆ ಮಂಟಪದಿಂದ ಓಡಿ ಹೋಗಿರುವ ವಧು. ಇಂದು ಬೆಳಗ್ಗೆ 9-30 ಕ್ಕೆ ಧಾರೆ ಮುಹೂರ್ತ ಇತ್ತು. ಆದರೆ ರಾತ್ರಿ ನಡೆದ ಆರತಕ್ಷತೆಯಲ್ಲಿ ಖುಷಿಯಿಂದಲೇ ಇದ್ದ ವಧು ಕಾವ್ಯಾ ರಾತ್ರೋ ರಾತ್ರಿ ಕಾಣೆಯಾಗಿದ್ದಾರೆ.
ಮೂಲತಃ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಕಾವ್ಯಾ ಅವರಿಗೆ ಯಡಿಯೂರು ನಿವಾಸಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ರಾಮಕೃಷ್ಣ ಅವರ ಜೊತೆ ಕುಟುಂಬದವರು ಮದುವೆಯನ್ನು ನಿಶ್ಚಯ ಮಾಡಿದ್ದರು. ಇಂದು ಯಡಿಯೂರು ದೇವಸ್ಥಾನದಲ್ಲಿ ವಿವಾಹ ನಡೆಯಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಆರತಕ್ಷತೆಯಲ್ಲಿದ್ದ ವಧು ರಾತ್ರೋ ರಾತ್ರಿ ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಒಟ್ಟಿನಲ್ಲಿ ವಧು ಕಾಣೆಯಿಂದ ಮದುವೆ ಮನೆಯಲ್ಲಿ ಮೌನ ಆವರಿಸಿಕೊಂಡಿದೆ.
ಇದನ್ನು ಓದಿ: ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!