ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!

Public TV
1 Min Read

– ಚಂದ್ರಾವತಿ ಕಾರ್ಯಕ್ಕೆ ಭಾರೀ ಪ್ರಶಂಸೆ

ಮಂಗಳೂರು: ಭಾರೀ ಅವಘಡ ತಪ್ಪಿಸುವ ಸಲುವಾಗಿ ಮಹಿಳೆಯೊಬ್ಬರು ಕೆಂಪು ವಸ್ತ್ರ ಹಿಡಿದು ರೈಲ (Train) ನ್ನೇ ನಿಲ್ಲಿಸಿದ ಅಚ್ಚರಿಯ ಘಟನೆಯೊಂದು ಮಂಗಳೂರಿ (Mangaluru) ನಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿಗೆ ಮರ ಬಿದ್ದಿತ್ತು. ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ಅರಿತ 70 ವರ್ಷದ ಚಂದ್ರಾವತಿ ತಕ್ಷಣ ಮನೆಗೆ ಓಡಿ ಕೆಂಪು ಬಟ್ಟೆ ತಂದು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.

ಇತ್ತ ಚಂದ್ರಾವತಿ ಕೆಂಪು ಬಟ್ಟೆ ತೋರಿಸುತ್ತಿದ್ದಂತೆಯೇ ಅಪಾಯ ಅರಿತು ಲೋಕೋಪೈಲೆಟ್ ತಕ್ಷಣ ರೈಲು ನಿಲ್ಲಿಸಿದ್ದಾರೆ. ಸುಮಾರು ಅರ್ಧ ತಾಸಿನ ಬಳಿಕ ಮರ ತೆರವು ಮಾಡಲಾಯಿತು. ಸದ್ಯ ಚಂದ್ರಾವತಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಮತ್ತೆ ಅಧಿಕಾರಕ್ಕೆ, ಹಲವು ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿ – ಬೊಮ್ಮಾಯಿ

Share This Article