ಅಣ್ಣನ ಜೊತೆಗೆ ಐಸ್‌ಕ್ರೀಮ್‌ ತೆಗೆದುಕೊಂಡು ಬರುವಾಗ ಅಪಘಾತ – ಬಾಲಕ ಸಾವು

By
1 Min Read

– ಕುಡಿದು ಟ್ರ್ಯಾಕ್ಟರ್‌ ಚಲಾಯಿಸಿದ್ದ ಚಾಲಕ ಪರಾರಿ

ಬೆಂಗಳೂರು: ಅಣ್ಣನ ಜೊತೆ ಬೇಕರಿಯಲ್ಲಿ ಐಸ್‌ಕ್ರೀಮ್‌ ತೆಗೆದುಕೊಂಡು ಬರುವಾಗ ಟ್ರ್ಯಾಕ್ಟರ್‌ ವಾಟರ್‌ ಟ್ಯಾಂಕರ್‌ ಡಿಕ್ಕಿ ಹೊಡೆದು ಬಾಲಕ ಸಾವಿಗೀಡಾಗಿರುವ ದಾರುಣ ಘಟನೆ ಬೆಂಗಳೂರಿನ (Bengaluru) ಹೊರವಲಯದ ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ನಡೆದಿದೆ.

ಬಾಲಕ ಭುವನ್‌ (4) ಮೃತಪಟ್ಟ ದುರ್ದೈವಿ. ಚಾಲಕ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್‌ ವಾಟರ್‌ ಟ್ಯಾಂಕರ್‌ ಚಲಾಯಿಸಿದ್ದ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಟ್ಯಾಂಕರ್‌ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ

ಭುವನ್‌ ತನ್ನ ಅಣ್ಣನ ಜೊತೆ ಬೇಕರಿಯಲ್ಲಿ ಐಸ್‌ಕ್ರೀಮ್ ತೆಗೆದುಕೊಂಡು ಬರುವಾಗ ವಾಟರ್‌ ಟ್ಯಾಂಕರ್‌ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ

Share This Article