ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ ಸಿಲುಕಿ ದೇಹ ಛಿದ್ರ ಛಿದ್ರ; ಅಜ್ಜಿ ಮನೆಗೆ ಬಂದಿದ್ದ ಬಾಲಕ ಸಾವು

Public TV
1 Min Read

ಮೈಸೂರು: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ (Tractor) ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು (Nanjangudu) ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.

ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ (Tractor Rotavator) ಸಿಲುಕಿ ಬಾಲಕನ ದೇಹ ಛಿದ್ರ ಛಿದ್ರವಾಗಿ ಹೊಲದಲ್ಲೇ 8 ವರ್ಷದ ಬಾಲಕ ಭವಿಷ್ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿ ಅರೆಸ್ಟ್‌

ಚಾಮರಾಜನಗರಕ್ಕೆ ವಿವಾಹವಾಗಿದ್ದ ತಾಯಿ ಮಮತಾ, ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಈ ವೇಳೆ ಭವಿಷ್‌ ತನ್ನ ಸೋದರಮಾವನ ಜೊತೆ ಟ್ರ‍್ಯಾಕ್ಟರ್ ನಲ್ಲಿ ಜಮೀನಿಗೆ ತೆರಳಿದ್ದ. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಭವಿಷ್‌ ಟ್ರ‍್ಯಾಕ್ಟರ್ ನಿಂದ ಕೆಳಗೆ ಬಿದ್ದಿದ್ದಾನೆ ಬಳಿಕ ರೊಟಾವೆಲ್ಟರ್‌ಗೆ ಸಿಲುಕಿ ಅವಘಡ ಸಂಭವಿಸಿದೆ.

ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ (Nanjangudu Rural Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

Share This Article