ಬಿಗ್ ಬಾಸ್ ಮನೆಗೆ ಗನ್‌ಮ್ಯಾನ್‌ಗಳು- ಏನಿದು ಟ್ವಿಸ್ಟ್?

Public TV
1 Min Read

ದೊಡ್ಮನೆಯ ಆಟ ಜೋರಾಗಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಬದಲಾಗುತ್ತಿದೆ. ಈಗ ಮನೆಯ ಅಸಲಿ ಆಟ ಶುರುವಾಗಿದೆ. ಬಿಗ್ ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದಾರೆ. ಗನ್ ಮ್ಯಾನ್‌ಗಳ ಎಂಟ್ರಿ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಮನೆಗೆ(Bigg Boss House) 8 ಜನ ಗನ್ ಮ್ಯಾನ್‌ಗಳ (Gun Man) ಆಗಮನವಾಗಿದೆ. ಸಡನ್ ಆಗಿ ಗನ್ ಮ್ಯಾನ್‌ಗಳು ಎಂಟ್ರಿ ಕೊಟ್ಟಿರೋದು ನೋಡಿ ಮನೆ ಮಂದಿ ಒಮ್ಮೆ ಸೈಲೆಂಟ್ ಆಗಿದ್ದಾರೆ. ಬಳಿಕ ಚಪ್ಪಾಳೆ ಹೊಡೆದು ಸ್ಪರ್ಧಿಗಳು ಸ್ವಾಗತ ಕೋರಿದ್ದಾರೆ. ಅವರ ಮುಖದಲ್ಲಿರೋ ಮಂದಹಾಸ ನೋಡಿ ಮನೆಗೆ ಹೊಸ ಸೆಲೆಬ್ರಿಟಿ ಎಂಟ್ರಿ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಅಕ್ಟೋಬರ್ 9ರ ಎಪಿಸೋಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಮನೆಯಲ್ಲಿ 3 ಗಂಟೆಗಳ ಕಾಲ ಕಳೆಯುವ ಮೂಲಕ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದ್ದರು. ಪ್ರದೀಪ್ ಈಶ್ವರ್ ಅವರ ಎಂಟ್ರಿಗೆ ರಾಜಕೀಯ ರಂಗದಲ್ಲಿ (Politics) ಕೋಲಾಹಲ ಎಬ್ಬಿಸಿದ್ದರೂ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು. ಇದನ್ನೂ ಓದಿ:ತುಟಿಗೆ ತುಟಿ ಬೆರೆಸಿ ಬೆರಗು ಮೂಡಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ

ಅವರಂತೆಯೇ ಬೇರೆ ಸ್ಪರ್ಧಿ ಅಥವಾ ಸೆಲೆಬ್ರಿಟಿ ಗೆಸ್ಟ್ ಎಂಟ್ರಿ ಕೊಡುತ್ತಾರಾ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿಸಿದೆ. ಎಲ್ಲ ಅನುಮಾನಗಳಿಗೆ ಬಿಗ್ ಬಾಸ್ ಕಾರ್ಯಕ್ರಮದ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್