ಮದ್ವೆಯಾಗಿದ್ರೂ ಮತ್ತಿಬ್ಬರೊಂದಿಗೆ ಲವ್ವಿ ಡವ್ವಿ; ಪ್ರಿಯಕರನಿಂದಲೇ ತಾಯಿ-ಮಗುವಿನ ಹತ್ಯೆ

Public TV
2 Min Read

ಬೆಂಗಳೂರು: ಇಲ್ಲಿನ ಬಾಗಲಗುಂಟೆ ಠಾಣಾ (Bagalagunte Police Station) ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿ-ಮಗು ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸತ್ಯ ಬಯಲಾಗಿದ್ದು, ಮೃತಳ ಪ್ರಿಯಕರ ಶೇಖರ್‌ನನ್ನ ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ನವನೀತ (35) ಹಾಗೂ ಪುತ್ರ ಸಾಯಿ ಸೃಜನ್ (8) ಹತ್ಯೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪ್ರಿಯಕರ ಶೇಖರ್‌ನನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

CRIME

ಮದುವೆಯಾದ್ಮೇಲೂ ಮತ್ತಿಬ್ಬರೊಂದಿಗೆ ಪ್ರೇಮ:
ಕೊಲೆಯಾದ ಮಹಿಳೆ (Women) ನವನೀತ ತನ್ನ ಪತಿ ಚಂದ್ರುವಿನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ 2 ವರ್ಷಗಳಿಂದ ಮಗ ಸಾಯಿ ಸೃಜನ್ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನವನೀತ ಗಂಡಿನಿಂದ ದೂರಾದ ಮೇಲೆ ಆರೋಪಿ ಶೇಖರ್ ಜೊತೆಗೆ ಸ್ನೇಹ ಬೆಳೆಸಿದ್ದಳು. ಬಳಿಕ ಇಬ್ಬರು ಪ್ರೀತಿ ಮಾಡೋಕೆ ಶುರು ಮಾಡಿದ್ದರು. ಆದ್ರೆ ನವನೀತ ಇತ್ತೀಚೆಗೆ ಶೇಖರ್ ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದನ್ನ ಕಂಡ ಮೊದಲ ಪ್ರಿಯಕರ ಶೇಖರ್ ನವನೀತಳಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ಲೋಕೇಶ್ ಸಹವಾಸ ಬಿಡುವಂತೆ ಎಚ್ಚರಿಕೆ ಕೊಟ್ಟಿದ್ದಾನೆ, ಆಕೆ ಮೇಲೆ ಹಲ್ಲೆಯನ್ನೂ ಮಾಡಿದ್ದಾನೆ. ಆದರೂ ನನವನೀತ ಲೋಕೇಶ್ ಜೊತೆಗೆ ಸಂಪರ್ಕ ಹೊಂದಿದ್ದಳು.

ಇದರಿಂದ ಬೇಸತ್ತಿದ್ದ ಶೇಖರ್ ಶನಿವಾರ ಎಂದಿನಂತೆ ನವನೀತಳ ಮನೆಗೆ ಬಂದಿದ್ದಾನೆ. ನವನೀತಳ ಮಗನಿಗೆ ಜ್ಯೂಸ್ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಈ ವೇಳೆ ಆಕೆಯೊಂದಿಗೆ ಜಗಳ ಶುರು ಮಾಡಿ, ಚಾಕುವಿನಿಂದ ಕುತ್ತಿಗೆ ಹಿರಿದು ಕೊಲೆ ಮಾಡಿದ್ದಾನೆ. ನಂತರ ಅಂಗಡಿಯಿಂದ ಜ್ಯೂಸ್ ತೆಗೆದುಕೊಂಡುಬಂದ ಮಗುವಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ, ಸೀರೆಯಿಂದ ಮಗುವಿನ ಎರಡೂ ಕೈಕಾಲುಗಳನ್ನು ಕಟ್ಟಿದ್ದಾನೆ. ತಲೆ ದಿಂಬಿನಿಂದ ಉಸಿರುಗಟ್ಟಿಸಿ ಬಾಲಕನನ್ನೂ ಕೊಲೆ ಮಾಡಿದ್ದಾನೆ. ಎರಡು ಮೃತ ದೇಹಗಳನ್ನ ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದಾನೆ.

ಅಕ್ಕ ಪಕ್ಕದ ಏರಿಯಾ ಜನರಿಗೆ ನನಗೆ ಮೋಸ ಮಾಡಿದ್ದಾಳೆ ಅದಕ್ಕಾಗಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್