ಬೀಡಾಡಿ ಬೆಕ್ಕಿಗೊಂದು ಸುಂದರ ಮನೆ – ಮಂಗಳೂರಿನ ಮಾಲ್‌ಗೆ ಬರೋರ ಕಣ್ಮಣಿಯಾದ ವೈಟ್ ಕ್ಯಾಟ್

Public TV
2 Min Read

ಮಂಗಳೂರು: ಊರೂರು ಸುತ್ತಾಡುತ್ತಿದ್ದ ಬೆಕ್ಕೊಂದು ಇದೀಗ ಮಂಗಳೂರಿನ ಮಾಲ್‌ವೊಂದರ ಸೆಲೆಬ್ರಿಟಿ ಕ್ಯಾಟ್ (White Cat) ಆಗಿ ಬದಲಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಆ ಬೆಕ್ಕು ಅದ್ಹೇಗೋ ಸಂದರ್ಶಕರ ಜೊತೆ ಮಾಲ್‌ಗೆ ಅಚಾನಕ್ ಆಗಿ ಎಂಟ್ರಿ ಕೊಟ್ಟಿತ್ತು. ಬಳಿಕ ಅಲ್ಲೇ ವಾಸ ಮಾಡತೊಡಗಿತು. ದಿನ ಹೋದಂತೆ ಸಿಬ್ಬಂದಿಯ ಸ್ನೇಹ ಸಂಪಾದಿಸಿದ ಆ ಬೆಕ್ಕು ಮಾಲ್‌ನಲ್ಲಿ ‘ಮಿಂಚು’ ಹರಿಸಿದ್ದಲ್ಲದೆ, ಸೆಲೆಬ್ರಿಟಿಯಾಗಿ ಮಾರ್ಪಾಡಾಗಿದೆ. ಪ್ರಸ್ತುತ ಇದರ ವಾಸಕ್ಕೊಂದು ಕ್ಯಾಟ್ ಹೌಸ್ ನಿರ್ಮಿಸಲಾಗಿದೆ.

ಮಂಗಳೂರಿನ ಪಾಂಡೇಶ್ವರದಲ್ಲಿರುವ (Pandeshwara) ಫೋರಂ ಮಾಲ್‌ನ (Forum Mall) ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡ್ಡಾಡುತ್ತಿರುವ ಈ ಬೆಕ್ಕು ಮುದ್ದು ಮುದ್ದಾಗಿದೆ. ಒಂದೇ ನೋಟಕ್ಕೆ ಸೆಳೆಯುವ ಅದರ ಕಣ್ಣುಗಳು, ತಳುಕು-ಬಳುಕಿನ ನಡಿಗೆಯಿಂದ ಮಾಲ್‌ಗೆ ಭೇಟಿ ನೀಡುವವರನ್ನು ಆಕರ್ಷಿಸುತ್ತಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಎನ್‌ಕೌಂಟರ್ – ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

ಮಾಲ್‌ಗೆ ಭೇಟಿ ನೀಡುವ ಕೆಲವರು ಒಂದು ಕ್ಷಣ ಬೆಕ್ಕಿನತ್ತ ಆಗಮಿಸಿ ಫೋಟೋ, ಸೆಲ್ಫಿ ತೆಗೆದು ಸಂಭ್ರಮಿಸುತ್ತಾರೆ. ಇದರ ಚಲನವಲನ ಕಂಡ ಮಾಲ್ ಸಿಬ್ಬಂದಿ ‘ಮಿಂಚು’ ಅಂತ ಹೆಸರು ಇಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಬೆಕ್ಕಿಗಾಗಿ ಸಿಬ್ಬಂದಿ ಕ್ಯಾಟ್ ಹೌಸ್ (ಬೆಕ್ಕಿನ ಮನೆ) ನಿರ್ಮಿಸಿದ್ದಾರೆ. ಇದನ್ನೂ ಓದಿ: Anti Drugs Day | ಡ್ರಗ್ಸ್‌ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸಿ – ನಿರ್ಮಾಪಕ ದಿಲ್‌ರಾಜ್

ತಿಂಡಿ-ತಿನಿಸಲ್ಲೂ ಶಿಸ್ತು:
ಮಾಲ್‌ಗೆ ಭೇಟಿ ನೀಡುವವರೆಲ್ಲರಲ್ಲೂ ಕೆಲ ಕ್ಷಣಗಳು ಖುಷಿಯನ್ನು ನೀಡುತ್ತವೆ. ಬೆಳಗ್ಗೆ ಹಾಗೂ ಸಂಜೆ ಕನಿಷ್ಠ ಐದು ನಿಮಿಷವಾದರೂ ಆಟವಾಡುತ್ತೇನೆ. ಅದರ ಜೊತೆ ಮಾತನಾಡದಿದ್ದರೆ ದಿನವೇ ಅಪೂರ್ಣವೆನಿಸುತ್ತದೆ. ತಿಂಡಿ-ತಿನಿಸಲ್ಲೂ ಶಿಸ್ತು ಕಾಪಾಡಿಕೊಂಡ ಮಿಂಚು ತನಗೆ ಮನಸ್ಸಾದರೆ ಮಾತ್ರ ಸಂದರ್ಶಕರು ಕೊಟ್ಟ ತಿಂಡಿ ಸ್ವೀಕರಿಸುತ್ತಾಳೆ, ಇಲ್ಲಾಂದ್ರೆ ನೋ ಚಾನ್ಸ್ ಅನ್ನುತ್ತಾರೆ ಮಾಲ್‌ನ ಸಿಬ್ಬಂದಿಯೋರ್ವರು. ಇದನ್ನೂ ಓದಿ: ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್

ಈ ಮಿಂಚು ಬೆಕ್ಕಿಗೆ ಬೆಳಗ್ಗಿನ ನಿಯಮಿತ ಆಹಾರವನ್ನು ಮಾಲ್‌ನ ಸಿಬ್ಬಂದಿ ನೀಡಿದರೆ, ಸಂಜೆ ಸ್ಥಳೀಯರೊಬ್ಬರು ತಿಂಡಿಗಳನ್ನು ಹಾಕಿ ಪೋಷಿಸುತ್ತಾರೆ. ಎಲ್ಲೋ ಸುತ್ತಾಡಿಕೊಂಡು ಇರಬೇಕಾದ ಈ ಸುಂದರ ಬೆಕ್ಕು ಇದೀಗ ಮಾಲ್‌ನಲ್ಲಿ ತನ್ನ ಮನೆಯಲ್ಲೇ ವಾಸವಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

Share This Article