– ಜಪಾನಿನ ಪ್ರಸಿದ್ಧ ವೆಬ್‌ಸೀರಿಸ್ ಡೆತ್‌ನೋಟ್
– ಎಲ್ಲಾ ಸಂಚಿಕೆಗಳನ್ನು ತಪ್ಪದೇ ನೋಡಿದ್ದ ಗಂಧಾರ್
– ತನ್ನ ರೂಮಿನಲ್ಲೇ ವೆಬ್ ಸೀರಿಸ್ ಪಾತ್ರ ಬಿಡಿಸಿದ್ದ ಬಾಲಕ
ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರಿನ (Benngaluru) ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕ ಗಂಧಾರ್ (Gandhar) ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಅಮ್ಮ ಅಮ್ಮ ಅಣ್ಣ ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದ ಆ ಬಾಲಕ ಏಕಾಏಕಿ ನೇಣಿಗೆ ಶರಣಾಗಿದ್ದು ಎಲ್ಲರಿಗೂ ಶಾಕ್ ಆಗಿತ್ತು. ಈ ಪ್ರಕರಣದ ತನಿಖೆಗೆ ಇಳಿದಾಗ ಹಲವರು ಶಾಕಿಂಗ್ ವಿಚಾರಗಳು ಮುನ್ನೆಲೆಗೆ ಬಂದಿವೆ.
ರಾತ್ರಿ ಎಲ್ಲರ ಜೊತೆಗೆ ಊಟ ಮಾಡಿ ತನ್ನ ಪ್ರೀತಿಯ ನಾಯಿ ರಾಕಿ ಜೊತೆಗೆ ಮಲಗಿದ್ದ ಗಂಧಾರ್ ಬೆಳಗಿನ ವೇಳೆ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದ. ನೇಣಿಗೆ ಶರಣಾಗುವ ಮೊದಲು ಒಂದು ಡೆತ್ ನೋಟ್ (Death Note) ಬರೆದಿದ್ದ. ಅದರಲ್ಲಿ ತಂದೆ ತಾಯಿಯನ್ನು ಉದ್ದೇಶಿಸಿ ನೀವು ನನ್ನನ್ನು ಹದಿನಾಲ್ಕು ವರ್ಷ ಚೆನ್ನಾಗಿಯೇ ಸಾಕಿದ್ದೀರಿ. ನಿಮ್ಮ ಜೊತೆಗೆ ನಾನು ತುಂಬಾ ಖುಷಿಯಾಗಿದ್ದೆ. ಆದರೆ ನಾನು ಹೋಗುವ ಸಮಯ ಬಂದಿದೆ. ನೀವು ಈ ಪತ್ರ ಓದುವ ವೇಳೆಗೆ ನಾನು ಸ್ವರ್ಗದಲ್ಲಿ ಇರುತ್ತೇನೆ ಎಂದು ಡೆತ್ ನೋಟ್ ಬರೆದಿದ್ದ.
ಈ ಡೆತ್ ನೋಟ್ ನೋಡಿದ ಎಲ್ಲರಿಗೂ ಶಾಕ್ ಆಗಿತ್ತು. ಅದರಲ್ಲಿ ಯಾವುದೇ ನೆಗಟಿವ್ ವಿಚಾರಗಳಿಲ್ಲ, ಯಾರ ಮೇಲೂ ಆರೋಪಗಳಿಲ್ಲ. ಯಾವುದೇ ಸಮಸ್ಯೆ ಕೂಡ ಇಲ್ಲ. ಹೀಗಿದ್ದರೂ ಈ ಬಾಲಕ ಇಷ್ಟು ಚಿಕ್ಕವಯಸ್ಸಿಗೆ ಯಾಕೆ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಎಂಬ ಪ್ರಶ್ನೆ ಎದ್ದಿತ್ತು. ಇದನ್ನೂ ಓದಿ: ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್
ಪ್ರಕರಣ ದಾಖಲಿಸಿ ಪೊಲೀಸರು ತನಿಖೆಗೆ ಇಳಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಗಂಧಾರ್ ಜಪಾನೀಸ್ (Japan) ಭಾಷೆಯಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದ ಡೆತ್ ನೋಟ್(Death Note) ವೆಬ್ ಸೀರಿಸ್ (Web Series) ಎಲ್ಲಾ ಸಂಚಿಕೆಯನ್ನು ತಪ್ಪದೇ ನೋಡುತ್ತಿದ್ದ. ಅಷ್ಟೇ ಅಲ್ಲದೇ ಆ ವೆಬ್ ಸಿರಿಸ್ ಬರುವ ಒಂದು ಪಾತ್ರವನ್ನು ಗಂಧಾರ್ ತನ್ನ ರೂಮಿನಲ್ಲಿ ಬಿಡಿಸಿದ್ದ.
ಈ ವೆಬ್ ಸೀರಿಸ್‌ನಲ್ಲಿ ಒಂದು ಪಾತ್ರವಿದೆ. ಆ ಪಾತ್ರ ಹೇಳಿದಂತೆ ಹೀರೋ ನಡೆದುಕೊಳ್ಳುತ್ತಾನೆ. ಆ ಮಾಯಬುಕ್‌ನಲ್ಲಿ ಯಾರ ಹೆಸರು ಬರೆದು ಅವರು ಹೇಗೆ ಸಾಯಬೇಕು ಎಂದು ಊಹೆ ಮಾಡಿಕೊಂಡರೆ ಆ ವ್ಯಕ್ತಿ ಆ ರೀತಿ ಸಾಯುತ್ತಾನೆ. ಕೆಟ್ಟವರು ಯಾರು ಕೂಡ ಭೂಮಿ ಮೇಲೆ ಬದಕಬಾರದು. ಅವರನ್ನು ಕೊಲೆ ಮಾಡಬೇಕು ಎನ್ನುವುದೇ ಆ ವೆಬ್ ಸೀರಿಸ್‌ನ ಕಥಾವಸ್ತು.
ಈ ಡೆತ್‌ನೋಟ್ ವೆಬ್ ಸೀರಿಸ್ ನೋಡಿ ಅದರ ಅದರ ಪ್ರಭಾವಕ್ಕೆ ಒಳಗಾಗಿ ಗಂಧಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಅತಿಯಾದ ಅಧ್ಯಾತ್ಮದ ಕಡೆಗೆ ಒಲವು ಇರುವ ಅನುಮಾನವೂ ವ್ಯಕ್ತವಾಗಿದೆ. ಸದ್ಯ ಬಾಲಕ ಗಂಧಾರ್ ಬಳಸುತ್ತಿದ್ದ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.